ಗೌರವಾಧ್ಯಕ್ಷ ಸಂತೋಷ್ ಕುಮಾರ್, ಅಧ್ಯಕ್ಷ ವಿಶ್ವನಾಥ ನಾೖಕ್, ಉಪಾಧ್ಯಕ್ಷ ರಘುವೀರ್ ನಾೖಕ್, ಪ್ರ. ಕಾರ್ಯದರ್ಶಿ ಮನೋಹರ್ ನಾೖಕ್
ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ 2025-28ನೇ ಸಾಲಿನ (3 ವರ್ಷಗಳ ಅವಧಿ) ನೂತನ ಪದಾಧಿಕಾರಿಗಳ ಆಯ್ಕೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಆ.4ರಂದು ನಡೆಯಿತು.
ಸಂಘದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಇವರನ್ನು ಗೌರವಾಧ್ಯಕ್ಷರಾಗಿ, ವಿಶ್ವನಾಥ ನಾೖಕ್ ವರ್ಕಾಡಿ ಅಧ್ಯಕ್ಷರಾಗಿ, ರಘುವೀರ್ ನಾೖಕ್ ಉಪಾಧ್ಯಕ್ಷರಾಗಿ, ಮನೋಹರ್ ನಾೖಕ್ ಕೊಳಕ್ಕಿಮಾರ್ ಪ್ರಧಾನ ಕಾರ್ಯದರ್ಶಿಯಾಗಿ, ಯೊಗೀಶ್ ನಾೖಕ್ ಜೊತೆ ಕಾರ್ಯದರ್ಶಿಯಾಗಿ, ಕವನ್ ನಾೖಕ್ ವಕೀಲರು ಸಂಘಟನಾ ಕಾರ್ಯದರ್ಶಿಯಾಗಿ, ವಿಶಾಲಕ್ಷಿ ವಿ. ನಾೖಕ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರಾಧಕೃಷ್ಣ ನಾೖಕ್ ಕೊಟ್ಟಿಬೆಟ್ಟು, ಉಮೇಶ್ ನಾೖಕ್ ಪಿಲಿಕಳ, ರವಿಶಂಕರ್ ನಾೖಕ್ ಚಂದ್ರಮ್ಬೈಲು, ಹರೀಶ್ ನಾೖಕ್ ಉಂಡಿಲು, ಸದಾಶಿವ ನಾೖಕ್ ತೆಂಕಿಲ, ಸುರೇಶ್ ನಾೖಕ್ ಕಾಸರಗೋಡು, ಪ್ರೇಮ್ ಕುಮಾರ್ ನಾೖಕ್ ಮಂಗಳೂರು, ಸ್ಮಿತಾ ಸುಜಿತ್ ನಾೖಕ್ ಹಣಿಯೂರು, ಸುಧಾಕರ್ ಕೆ.ಪಿ. ಕಲ್ಲಿಮಾರ್ ಇವರನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಬಾಲಕೃಷ್ಣ ನಾೖಕ್ ಅಮೈ ಕಾರ್ಯನಿರ್ವಹಿಸಿದರು. ಸಂಘದ ಸದಸ್ಯರು ಉಪಸ್ಥಿತರಿದ್ದರು.