ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಆ.8ರಂದು ಮುಕ್ರಂಪಾಡಿ ಸುಭದ್ರಾ ಕಲಾಮಂದಿರದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಭಜನಾ ಸಂಕೀರ್ತನೆ ನೆರವೇರಿತು.
ಭಜನಾ ಸಂಕೀರ್ತನೆಯನ್ನು ಜಯಶ್ರೀ ಆಚಾರ್ಯ ಕೆಮ್ಮಿಂಜೆ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಜನೆಯಿಂದ ಮನಸ್ಸಿನಲ್ಲಿರುವ ನಕರಾತ್ಮಕ ಗುಣಗಳನ್ನು ಹೋಗಲಾಡಿಸಿ ಸಕರಾತ್ಮಕವಾದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ. ನಮ್ಮ ಧರ್ಮ ನಮ್ಮ ಸಂಸ್ಕೃತಿ ನಮ್ಮ ಆಚಾರ ನಮ್ಮ ವಿಚಾರ ಮುಂದಿನ ಪೀಳಿಗೆಗೆ ತಿಳಿಸಲು ಅತ್ಯಂತ ಶ್ರೇಷ್ಠವಾದ ಕಾರ್ಯ ಎಂದರು. ಪ್ರೇಮಾ ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಮಹೇಂದ್ರವರ್ಮ, ಕೋಶಾಧಿಕಾರಿ ಗಣೇಶ್ ಚಂದ್ರ ಭಟ್ ಮಕರಂದ, ವರಮಹಾಲಕ್ಷ್ಮಿ ಸೇವಾ ಸಮಿತಿಯ ಉಪಾಧ್ಯಕ್ಷೆ ವೀಣಾ ಬಲ್ಲಾಳ್, ಪುಷ್ಪ ಆಚಾರ್ಯ, ಪ್ರೇಮ ಮುಂಡೂರು , ಕಾರ್ಯದರ್ಶಿ ಅನ್ನಪೂರ್ಣ ಬಲ್ಲಾಳ್, ಭಜನಾ ಸಂಚಾಲಕಿ ಪುಷ್ಪ ರಾಜೇಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟಿನ ಪ್ರಮುಖರಾದ ಭೀಮಯ್ಯ ಭಟ್, ಪ್ರವೀಣ್ ಭಂಡಾರಿ, ಕೃಷ್ಣಪ್ರಸಾದ್ ಶೆಟ್ಟಿ , ನವೀನ್ ರೈ ಪಂಜಳ , ಮನೀಶ್ ಕುಲಾಲ್ ಸುಭದ್ರಾದ ಮಾಲಕ ಗಿರೀಶ್ ಭಟ್, ರವಿ , ಉದಯ ಬಲ್ಲಾಳ್, ಕಿಶೋರ್ ನಗರ, ರಾಜೇಶ್ ಬೊಳುವಾರು, ಯಶವಂತ್, ಜನಾರ್ದನ ಕುರೆಮಜಲು, ಧನಂಜಯ ಕಲ್ಲಮ, ಪ್ರತೀಕ್ ಪುತ್ತಿಲ, ಶ್ರೀಕಾಂತ ಆಚಾರ್ಯ ಹಿಂದಾರು ಹಾಗೂ ಎರಡು ಸಮಿತಿಯ ಪದಾಧಿಕಾರಿಗಳು ಮತ್ತು ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 5 ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನೆರವೇರಿತು.