ಸೌಹಾರ್ದ ಸಮಿತಿ ಕೊಳ್ತಿಗೆ ವತಿಯಿಂದ ವನಮಹೋತ್ಸವ

0

ಕೊಳ್ತಿಗೆ :ಕೊಳ್ತಿಗೆ ರಸ್ತೆ ಬದಿಯಲ್ಲಿ ಸೌಹಾರ್ದ ಸಮಿತಿ ಕೊಳ್ತಿಗೆ ಇದರ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಗಸ್ಟ್ 8ರಂದು ವನಮಹೋತ್ಸವ ಕಾರ್ಯಕ್ರಮವು ನಡೆಯಿತು.

ಈ ವನಮಹೋತ್ಸವ ಕಾರ್ಯಕ್ರಮದ ನೇತೃತ್ವವನ್ನು ಸೌಹಾರ್ದ ಸಮಿತಿ ಕೊಳ್ತಿಗೆ ಇದರ ಸ್ಥಾಪಕಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ವಹಿಸಿದ್ದರು. ಕೊಳ್ತಿಗೆಯಿಂದ ನೆಟ್ಟಾರಿಗೆ ಹೋಗುವ ರಸ್ತೆ ಬದಿಯಲ್ಲಿ ವಿವಿಧ ಬಗೆಯ ಹಣ್ಣಿನ ಗಿಡವನ್ನು ನೆಡುವ ಮೂಲಕ ಈ ಕಾರ್ಯಕ್ರಮವು ನೆರವೇರಿತು.

ಈ ಗಿಡಗಳನ್ನು ನೆಟ್ಟಿರುವ ಮುಖ್ಯ ಉದ್ದೇಶ ಮಾನವ ಸಂಕುಲಕ್ಕೆ ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಿಗೂ ಇದರ ಸದುಪಯೋಗವಾಗಲೆಂದು ನೆಟ್ಟಿರುವುದಾಗಿ ಪ್ರದೀಪ್ ಕುಮಾರ್ ರೈ ಪಾಂಬಾರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಆನೆಗುಂಡಿ ವಲಯ ಅರಣ್ಯ ಅಧಿಕಾರಿ ಸೌಮ್ಯ, ಅರಣ್ಯ ರಕ್ಷಕರಾದ ಲಿಖಿತ್ ಮತ್ತು ಸತ್ಯನ್, ಕೊಳ್ತಿಗೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು ಹಾಗೂ ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಮೋದ್ ಕೆ. ಯಸ್, ಲಯನ್ಸ್ ಕ್ಲಬ್ ಜಲದುರ್ಗ ಬೆಳ್ಳಾರೆ ಇದರ ಸ್ಥಾಪಕ ಅಧ್ಯಕ್ಷರಾದ ಲ. ವಿಠಲ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಲ.ಉಷಾ. ಬಿ. ಭಟ್, ಪ್ರಥಮ ಉಪಾಧ್ಯಕ್ಷರಾದ ಲ. ದಯಾಕರ ಆಳ್ವ, ಕೋಶಾಧಿಕಾರಿ ಲ. ಎಂ. ಕೆ. ಶೆಟ್ಟಿ, ಜನಾರ್ಧನ ಪೂಜಾರಿ ಮೆರಡ್ಕ, ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಪಡ್ರೆ, ಪವನ್ ದೊಡ್ಡಮನೆ, ಸೌಹಾರ್ದ ಸಮಿತಿಯ ಉಪಾಧ್ಯಕ್ಷರಾದ ರತನ್ ರೈ,ಖಜಾಂಜಿ ಸೀತಾರಾಮ ಶೆಟ್ಟಿ ಮೊಗಪ್ಪೆ, ಸಂಘಟನಾ ಕಾರ್ಯದರ್ಶಿಗಳಾದ ಜೀವರಾಜ್ ಮೊಗಪ್ಪೆ, ಲೋಹಿತ್ ಬಾರಿಕೆ, ಸಾಂಸ್ಕೃತಿಕ ಕಾರ್ಯದರ್ಶಿ ಶಾಹುಲ್ ಅಮಲ, ಪದಾಧಿಕಾರಿಗಳಾದ ವಿವೇಕ್ ಕಜೆ, ಅನುಷ್ ರೈ ಕೆಳಗಿನಮನೆ, ವರುಣ್ ಕೊಳತ್ತು, ರವೀಂದ್ರ ಕೆಮ್ಮಾರ,ರವಿ ಕೆಮ್ಮಾರ, ಶಿವಪ್ಪ ಪೂಜಾರಿ ಕುಳ್ಳಂಪಾಡಿ, ಹಂಝ ಆರ್ಷದ್ ಪೆರ್ಲಂ ಪಾಡಿ ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here