ಪುತ್ತೂರು: ಸವಣೂರಿನಲ್ಲಿ ನಡೆಯಲಿರುವ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಬಗ್ಗೆ ಸಮಾಲೋಚನಾ ಸಭೆಯು ಸವಣೂರು ವಿನಾಯಕ ಸಭಾಭವನದಲ್ಲಿ ಜರಗಿತು.
ಸಮಿತಿಯ ಗೌರವಧ್ಯಕ್ಷರಾದ “ಸಹಕಾರರತ್ನ” ಸವಣೂರು ಕೆ ಸೀತಾರಾಮ ರೈರವರು ಮಾತನಾಡಿ, ಈ ಬಾರಿ 43ನೇ ವರುಷದ ಗಣೇಶೋತ್ಸವ ಆಚರಣೆಯಲ್ಲಿ ಇದ್ದೇವೆ.
ಈ ಸಂದರ್ಭದಲ್ಲಿ ಸವಣೂರಿನ ಗಣಪತಿ ದೇವರಿಗೆ ಉದ್ಯಮಿ ಎನ್ ಸುಂದರ ರೈ ಸವಣೂರುರವರು ಬೆಳ್ಳಿ ಕಿರೀಟವನ್ನು ಸಮರ್ಪಣೆ ಮಾಡಲಿದ್ದಾರೆ ಎಂದು ಹೇಳಿ, ಶಾಶ್ವತ ಅನ್ನಛತ್ರಕ್ಕೆ ನಿರ್ಮಾಣ ಕಾರ್‍ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಸಿ ಎ ಬ್ಯಾಂಕ್ ಅಧ್ಯಕ್ಷ ತಾರಾನಾಥ್ ಕಾಯರ್ಗ ಮುಖ್ಯಕಾರ್ಯನಿರ್ವಹನಾಧಿಕಾರಿ ಚಂದ್ರಶೇಖರ್ ಪಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿರವರುಗಳು ಸಂಧಭೋಚಿತವಾಗಿ ಮಾತನಾಡಿದರು. ಉದ್ಯಮಿ ಎನ್ ಸುಂದರ ರೈ ಸವಣೂರು. ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘ ನಿರ್ದೇಶಕ ಪದ್ಮಯ್ಯ ಗೌಡ ಪರಣೆ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಬಾಲಚಂದ್ರ ರೈ ಕೆರೆಕೊಡಿ, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಗಣೇಶೋತ್ಸವ ಸಮಿತಿಯ ಸದಸ್ಯರುಗಳಾದ ಸುರೇಶ್ ಎಸ್ ಸರ್ವೆ, ವೆಂಕಪ್ಪ ಗೌಡ ಆಡಿಲು, ಶಾರದಾ ಮಾಲೆತ್ತಾರು, ಗಂಗಾಧರ ಪೆರಿಯಡ್ಕ, ಗಂಗಾಧರ ಸುಣ್ಣಾಜೆ, ಮೋಹನ ರೈ ಕೆರೆಕೊಡಿ, ಕುಂಞ ಅರೇಲ್ತಾಡಿ, ಅನಿತಾ ಲಕ್ಷ್ಮಣ ಕೆಡೆಂಜಿ, ದಿವಾಕರ ಬಸ್ತಿ, ಸವಣೂರು ಗ್ರಾ.ಪಂ, ಸದಸ್ಯರುಗಳಾದ ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಪ್ರಮುಖರಾದ ಜಯರಾಮ್ ರೈ ಮೂಡಂಬೈಲು, ಸಂಜೀವ ಪೂಜಾರಿ ಅಗರಿ, ಚಂದಪ್ಪ ಪೂಜಾರಿ ಊರುಸಾಗು, ಪುಟ್ಟಣ್ಣ ಬಂಬಿಲ ಉಮೇಶ್ ಬೇರಿಕೆ, ಶೇಖರ ಬಸ್ತಿ, ಶೇಷಪ್ಪ ನಾಯ್ಕ, ನಮ್ಮಿರಾಜ್, ಮಮತಾ ಪ್ರಭಾಕರ ಶೆಟ್ಟಿ ನಡುಬೈಲು, ಪ್ರಮೀಳಾ ಇಡ್ಯಾಡಿ, ಚಂದ್ರಕಲಾ ಕಟ್ಟತ್ತಾರು, ರಮ್ಯಾ ಕಟ್ಟತ್ತಾರು, ಬೇಬಿ ಬಂಬಿಲ, ಸಂಧ್ಯಾ, ವೇದ ದಯಾನಂದ ಬೇರಿಕೆ, ಚಂದ್ರಾವತಿ, ವಿಜಯ ಲಕ್ಷ್ಮಿ ಮುಗೇರು, ಪದ್ಮಲತಾ ವಂಕಟೇಶ್ ಇಡ್ಯಾಡಿ, ಪ್ರಮೀಳಾ ಆನಂದ ಇಡ್ಯಾಡಿ, ಬೃಂದಾ ಅಗರಿ, ಯಶೋಧ ನವೀನ್ ಮೆದು, ಜಯಶ್ರೀ ಕುಚ್ಚೆಜಾಲು, ಚಂದ್ರಾವತಿ, ವನಜ ಪಟ್ಟೆ, ನಳಿನಿ ತಿಂಗಳಾಡಿರವರುಗಳು ಉಪಸ್ಥಿತರಿದ್ದರು. ಸಮಿತಿಯ ಕಾರ್‍ಯದರ್ಶಿ ಸತೀಶ್ ಬಲ್ಯಾಯ ಸ್ವಾಗತಿಸಿ, ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು.