ಪುತ್ತೂರು: ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆ ಪಾಳ್ಯತ್ತಡ್ಕ ಈಶ್ವರಮಂಗಲ ಇಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ ನಡೆಯಿತು.
ಕಾರ್ಯಕ್ರಮದಲ್ಲಿ 18 ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳನ್ನು ತಯಾರಿಸಿದರು. 5 ವಿದ್ಯಾರ್ಥಿಗಳು ಬಹುಮಾನವನ್ನು ಪಡೆದುಕೊಂಡರು. ಪ್ರಥಮ ಸ್ಥಾನ ಮುಹಮ್ಮದ್ ಇಯಾಸ್ ಮತ್ತು ಪಹದ್ ರಾಝಿ, ದ್ವಿತೀಯ ಸ್ಥಾನ ಫಾತಿಮತ್ ಶೈಮ ಹಾಗೂ ತೃತೀಯ ಸ್ಥಾನವನ್ನು ಕೆ.ಜೆ ರತನ್ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮುಹಮ್ಮದ್ ಉನೈಸ್ ಹಾಗೂ ಮುಹಮ್ಮದ್ ಅಪ್ಸಲ್ ಚತುರ್ಥ ಸ್ಥಾನ ಹಾಗೂ ಸಾಹಸ್ ಆರ್. ಎ ಪಂಚಮ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದರು.
