ಕೊಳ್ತಿಗೆ : ಲಯನ್ಸ್ ಕ್ಲಬ್ ಜಲದುರ್ಗ ಬೆಳ್ಳಾರೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆಯಲ್ಲಿ ಜರಗಿತು. ವಿವಿಧ ಜಾತಿಯ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಥಮ ಉಪಾಧ್ಯಕ್ಷರಾದ ಲ. ದಯಾಕರ ಆಳ್ವ, ಸ್ಥಾಪಕಾಧ್ಯಕ್ಷರಾದ ಲ. ವಿಠಲ್ ಶೆಟ್ಟಿ, ನಿಕಟಪೂರ್ವದ್ಯಕ್ಷರಾದ ಲ. ಉಷಾ. ಬಿ. ಭಟ್, ಕೋಶಾಧಿಕಾರಿ ಲ. ಎಂ. ಕೆ. ಶೆಟ್ಟಿ, ತೃತೀಯ ಉಪಾಧ್ಯಕ್ಷರಾದ ಲ. ಪ್ರದೀಪ್ ಕುಮಾರ್ ರೈ ಪಾಂಬಾರು, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಸೌಮ್ಯ, ಅರಣ್ಯರಕ್ಷಕರಾದ ಲಿಖಿತ್, ಸತ್ಯನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಎಂ ಮೇರಡ್ಕ, ಶಾಲಾ ಮುಖ್ಯ ಗುರುಗಳಾದ ರವಿರಾಜ್, ಹಳೆ ವಿದ್ಯಾರ್ಥಿ ಸಂಘದ ಶಾಹುಲ್ ಅಮಲ, ಲೋಹಿತ್ ಬಾರಿಕೆ, ವಿವೇಕ್ ಕಜೆ, ರವೀಂದ್ರ ಕೆಮ್ಮಾರ, ರವಿ ಕೆಮ್ಮಾರ, ರತನ್ ರೈ ಕೊರಂಬಡ್ಕ ಬೀಡು ಮತ್ತಿತರರು ಪಾಲ್ಗೊಂಡಿದ್ದರು.
