ಪುತ್ತೂರು: ಪುತ್ತೂರಿನಲ್ಲಿ ಕಾಸ್ಮಿಕ್ ಗೇಮ್ಸ್ ವತಿಯಿಂದ ಮೊಟ್ಟಮೊದಲ ಬಾರಿಗೆ Season 1 PS5 FIFA ಓಪನ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ಗೇಮಿಂಗ್ ಪ್ರಿಯರಿಗೆ ಇದು ಹೊಸ ಅನುಭವ ಹಾಗೂ ತಮ್ಮ ಕೌಶಲ್ಯವನ್ನು ಪರೀಕ್ಷಿಸಿಕೊಳ್ಳುವ ಅಪೂರ್ವ ಅವಕಾಶ. ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಪ್ರವೇಶವಿದ್ದು, ಪ್ರತಿ ತಂಡದಲ್ಲಿ 2 ಜನರು ಭಾಗವಹಿಸಬಹುದು. ಆಟಗಾರರು ತಮ್ಮ ಇಚ್ಛೆಯಂತೆ ತಂಡವನ್ನು ಆಯ್ಕೆ ಮಾಡಿಕೊಳ್ಳಬಹುದು.
ಟೂರ್ನಮೆಂಟ್‌ನಲ್ಲಿ 1ನೇ ಬಹುಮಾನ 2000 ನಗದು ಮತ್ತು 2ನೇ ಬಹುಮಾನ 1000 ನಗದು ನೀಡಲಾಗುತ್ತದೆ. ಪ್ರತಿ ತಂಡದ ಎಂಟ್ರಿ ಫೀ ಕೇವಲ 250 ಮಾತ್ರ. First cum first serve ಆಧಾರದ ಮೇಲೆ ನೋಂದಣಿ ನಡೆಯಲಿದ್ದು, ಮೊದಲಿಗೆ ನೋಂದಾಯಿಸಿದವರಿಗೆ ತಮಗೆ ಇಷ್ಟವಾದ ತಂಡವನ್ನು ಆಯ್ಕೆಮಾಡಲು ಮೊದಲ ಆದ್ಯತೆ ನೀಡಲಾಗುವುದು. ಸ್ಪರ್ಧೆಗೆ ಸಂಬಂಧಿತ ನಿಯಮಗಳ ವಿವರವನ್ನು ದರ್ಬೆಯಲ್ಲಿರುವ ಕಾಸ್ಮಿಕ್ ಗೇಮಿಂಗ್ ಸೆಂಟರ್ ಗೆ ಬಂದು ಪಡೆಯಬಹುದು. ಈ ಕಾರ್ಯಕ್ರಮ Cosmic Games, ಪುತ್ತೂರು ನಲ್ಲಿ ಆ.16 ರಂದು ಬೆಳಗ್ಗೆ 11:00 ರಿಂದ ಸಂಜೆ 5:00 ಗಂಟೆವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9113976505 ಸಂಪರ್ಕಿಸಬಹುದಾಗಿದೆ.