ಕೆಯ್ಯೂರು: ಕೆಯ್ಯೂರು ಗ್ರಾಮದ ಬೊಳಿಕಲ ನಿವಾಸಿ ಗಿರಿಯಪ್ಪ ಗೌಡ(48) ಅವರು ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಆ.10 ರಂದು ನಿಧನರಾದರು.
ಮೃತರು ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು ಶಿಕ್ಷಕಿ ನಯನಾ, ಪುತ್ರರಾದ ತಸ್ವೀನ್, ಲವೀನ್, ತಾಯಿ ಲಕ್ಷ್ಮೀ, ಸಹೋದರ ಪೂವಪ್ಪ ಗೌಡ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.