ಪುತ್ತೂರು: ಸರ್ವೆ ಶ್ರೀಗೌರಿ ಮಹಿಳಾ ಮಂಡಲದ ವತಿಯಿಂದ ಕಲ್ಲಮ ಶ್ರೀರಾಘವೇಂದ್ರ ಮಠದಲ್ಲಿ ಶ್ರದ್ದಾ ಭಕ್ತಿಯಿಂದ ನಾಲ್ಕನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆಯನ್ನು ಮಠದ ಪ್ರಧಾನ ಅರ್ಚಕರಾದ ಸುಧೀಂದ್ರ ಅಡಿಗ ಅವರ ಪೌರೋಹಿತ್ಯದ ಮೂಲಕ ನೆರವೇರಿಸಲಾಯಿತು.

ರಾಘವೇಂದ್ರ ಮಠದ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಕಲ್ಲಮ್ಮ ಮತ್ತು ಅನುರಾಧ ಭಟ್ ಕಲ್ಲಮ್ಮ ದಂಪತಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾದರು. ನೂರಾರು ಹೆಂಗಳೆಯರು ಸೇವೆಯನ್ನು ಮಾಡುವ ಮೂಲಕ ಶ್ರೀವರಮಹಾಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾದರು. ಬೆಳಿಗ್ಗೆ ಗಂಟೆ 10 ರಿಂದ 11:45 ರವರೆಗೆ ನವಚೇತನ ತಂಡ ಪುರುಷರಕಟ್ಟೆ ಸದಸ್ಯರಿಂದ ಭಗವದ್ಗೀತೆ ಪಾರಾಯಣ, ಶ್ರೀ ರಾಮರ್ಪಣ ಭಜನಾ ತಂಡದ ಮಾತೆಯರಿಂದ ಲಲಿತ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ಮತ್ತು ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಶ್ರೀ ಗೌರಿ ಮಹಿಳಾ ಮಂಡಲದ ಸದಸ್ಯರಿಂದ ಭಜನಾ ಸಂಕೀರ್ತನಾ ಸೇವೆ ನೆರವೇರಿತು. ಮಹಾಪೂಜೆ ಬಳಿಕ ಮಧ್ಯಾಹ್ನ 12:30 ರಿಂದ ಅನ್ನ ಸಂತರ್ಪಣೆ ನಡೆಯಿತು. ಅನೇಕ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾದರು.
ಈ ಸಂದರ್ಭದಲ್ಲಿ ಸರ್ವೆ- ಮುಂಡೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಚಂದ್ರಶೇಖರ್ ಎನ್ ಎಸ್ ಡಿ, ಪಂಚಾಯತಿನ ಸದಸ್ಯರಾದ ಕಮಲೇಶ್ ಎಸ್ ಡಿ, ಶ್ರೀಗೌರಿ ಮಹಿಳಾಮಂಡಲದ ಗೌರವಾಧ್ಯಕ್ಷರು, ಗೌರವ ಸಲಹೆಗಾರರು ,ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಊರಿನ ಗಣ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.