50 ಸಾವಿರ ರೂ. ವ್ಯಯಿಸಿ ಉಚಿತ ಕಲರ್ ಜೆರ್ಸಿ ವಿತರಣೆ
ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಸರಕಾರಿ ಹಿ.ಪ್ರಾ.ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಆ.9ರಂದು ಶಾಲೆಯಲ್ಲಿ ನಡೆಯಿತು. ಸುಮಾರು 50 ಸಾವಿರ ರೂ ವ್ಯಯಿಸಿ ಶಾಲೆಯ ಎಲ್ಲ ಮಕ್ಕಳಿಗೆ ಕಲರ್ ಜೆರ್ಸಿ(ಟಿಶರ್ಟ್, ಪ್ಯಾಂಟ್) ನೀಡಲಾಗಿದ್ದು ಇದಕ್ಕೆ ಶಾಲಾ ಶಿಕ್ಷಕ ವೃಂದದವರು, ಎಸ್‌ಡಿಎಂಸಿಯವರು ಹಾಗೂ ಪೋಷಕರು ಸಹಕಾರ ನೀಡಿದ್ದರು.
ಮುಖ್ಯವಾಗಿ ಶಾಲೆಯ ಮುಖ್ಯ ಶಿಕ್ಷಕಿ ಕಮಲಾ ಹಾಗೂ ಇತರ ಶಿಕ್ಷಕಿಯರು ತಮ್ಮ ವತಿಯಿಂದ ನಗದು ಮೊತ್ತವೊಂದನ್ನು ನೀಡಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮತ್ತು ಸದಸ್ಯರು ಕೂಡಾ ನಗದು ಮೊತ್ತ ನೀಡಿದ್ದರು. ಕೆಲವು ಪೋಷಕರು ಕೂಡಾ ನಗದು ರೂಪದಲ್ಲಿ ಸಹಾಯ ಮಾಡಿದ್ದರು. ಶಿಕ್ಷಕ ವೃಂದದವರು, ಎಸ್‌ಡಿಎಂಸಿಯವರು ಮತ್ತು ಕೆಲವು ಪೋಷಕರು ಸೇರಿಕೊಂಡು ಮಕ್ಕಳಿಗೆ ಉಚಿತ ಕಲರ್‌ಫುಲ್ ಸಮವಸ್ತ್ರ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ, ನಮ್ಮ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡುವ ವಿಚಾರದಲ್ಲಿ ಶಿಕ್ಷಕ ವೃಂದದವರು, ಎಸ್‌ಡಿಎಂಸಿಯವರು ಮತ್ತು ಪೋಷಕರು ಸಹಕಾರ ನೀಡಿದ್ದು ಅವರೆಲ್ಲರ ಸಹಕಾರದಿಂದ ಅಂದಾಜು 50 ಸಾವಿರ ರೂ ವ್ಯಯಿಸಿ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಲು ಸಾಧ್ಯವಾಗಿದೆ, ನಮ್ಮ ಶಾಲೆಯ ಮಕ್ಕಳು ಕೂಡಾ ಯಾವುದೇ ಸೌಕರ್ಯಗಳಿಂದ ವಂಚಿತವಾಗಬಾರದು ಮತ್ತು ಸರಕಾರಿ ಶಾಲೆಯ ಮಕ್ಕಳಿಗೂ ಯಾವುದೇ ಕೊರತೆ ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಲೆಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಜೆರ್ಸಿ ಮಾಡಿಸಿರುವುದು ಶ್ಲಾಘನೀಯ, ಶಿಕ್ಷಕ ವೃಂದದವರ ಮತ್ತು ಎಸ್‌ಡಿಎಂಸಿಯವರ ಒಗ್ಗಟ್ಟು ಮತ್ತು ಪೋಷಕರ ಭಾಗೀದಾರಿಕೆ ಇದರಲ್ಲಿ ಎದ್ದು ಕಾಣುತ್ತಿದೆ, ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಿದಾಗ ಶಾಲೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕಮಲಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಅನಿತಾ ಶೆಟ್ಟಿ, ಉಮಾವತಿ, ಜ್ಯೋತಿ, ದೀಕ್ಷಾ, ಅವಿತಾ ಹಾಗೂ ಎಸ್‌ಡಿಎಂಸಿ ಸದಸ್ಯರು ಸಹಕರಿಸಿದರು. ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.