ಬೊಬ್ಬೆಕೇರಿ ಶಾಲೆಯಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಸಾಮಾಜಿಕ ಪರಿಶೋಧನೆ- ಪೋಷಕರ ಸಭೆ

0

ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಸಾಮಾಜಿಕ ಪರಿಶೋಧನ ಸಮಿತಿ ವತಿಯಿಂದ ಶಾಲಾ ಪೋಷಕರ ಸಭೆ ಮತ್ತು ಸಾಮಾಜಿಕ ಪರಿಶೋಧನಾ ಸಭೆಯು ಆ 11ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್ ಅವರು ವಹಿಸಿದ್ದರು. ಆಲಂಕಾರು ಮೆಸ್ಕಾಂ ಕಿರಿಯ ಅಭಿಯಂತರಾದ ಪ್ರೇಮ್ ಕುಮಾರ್ ಅವರು ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತಾಲೂಕು ಸಾಮಾಜಿಕ ಪರಿಶೋಧನ ಮುಖ್ಯಸ್ಥ ಪ್ರವೀಣ್‌ ಮಾತನಾಡಿ, ಶಾಲಾ ಮಕ್ಕಳ ಕಲಿಕೆಗೆ ಪೂರಕವಾಗುವಂತಹ ವಾತಾವರಣ ಶಾಲೆಯಲ್ಲಿ ಮಕ್ಕಳ ಸುರಕ್ಷತೆ,
ಶಾಲೆಯ ಅಭಿವೃದ್ಧಿಗಾಗಿ ಪೋಷಕರು ಮಾಡಬೇಕಾದ ಕರ್ತವ್ಯ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಸರಕಾರದಿಂದ ಆಗಬೇಕಾದ ಕೆಲವೊಂದು ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿ, ಶಿಕ್ಷಣದಲ್ಲಿ ಆಗಬೇಕಾದ ಹೊಸ ಬದಲಾವಣೆಯ ಕುರಿತಾದ ಪೋಷಕರಲ್ಲಿನ ಚಿಂತನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕೊಠಡಿ ನಿರ್ಮಾಣ, ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆ, ಅತಿಥಿ ಶಿಕ್ಷಕರ ಅಗತ್ಯ, ಶಾಲೆ ಸಂಪರ್ಕ ರಸ್ತೆ ಅಭಿವೃದ್ಧಿ, ಪಿಠೋಪಕರಣ ಮುಂತಾದವುಗಳ ಬೇಡಿಕೆಯನ್ನು ಪೋಷಕರು ನೀಡಿದರು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯೆ ಸುನಂದಾ ಅಬ್ಬಡ, ಸಾಮಾಜಿಕ ಪರಿಶೋಧನಾ ಸಮಿತಿಯ ಸಿಬ್ಬಂದಿಗಳಾದ ಜಯಮಣಿ, ಪ್ರಣಮ್ಯ, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಶಶಿಕಲಾ ಸ್ವಾಗತಿಸಿದರು.ಶಿಕ್ಷಕ ಜನಾರ್ದನ ಹೇಮಳ ವಂದಿಸಿದರು.

LEAVE A REPLY

Please enter your comment!
Please enter your name here