ಪುತ್ತೂರು: ಉಡುಪಿಯ ಲಕ್ಷ್ಮಿ ಗುರುರಾಜ್ ಎನ್ ಎನ್ ಯು (ರಿ) ಮತ್ತು ನಾಟ್ಯ ಶಾಲಾ (ರಿ) ಜಂಟಿಯಾಗಿ ನಡೆಸುತ್ತಿರುವ ಪಾಕ್ಷಿಕ ನೃತ್ಯ ಸರಣಿ ಕಾರ್ಯಕ್ರಮ “ನೃತ್ಯ ದೀಪಿಕಾ” ಇದರ 12ನೇ ಆವೃತ್ತಿ ಆ.10 ರವಿವಾರದಂದು ಉಡುಪಿಯ ಕನ್ನರ್ಪಾಡಿ ಸ್ಥವಿಷ್ಠ ಸಭಾಂಗಣದಲ್ಲಿ ನಡೆಯಿತು.

ಪುತ್ತೂರಿನ ವೈಷ್ಣವೀ ನಾಟ್ಯಾಲಯದ ನೃತ್ಯಗುರು ಯೋಗೀಶ್ವರೀ ಜಯಪ್ರಕಾಶ್ ಇವರ ಶಿಷ್ಯೆ ಶಮಾ ವಳಕುಂಜ ಇವರ ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಯಿತು. ಉಡುಪಿಯ ಯಕ್ಷಗಾನ ಕಲಾ ರಂಗದ ಅಧ್ಯಕ್ಷರಾದ ಎಂ ಗಂಗಾಧರ ರಾವ್ ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ವೇದಿಕೆಯಲ್ಲಿ ನೃತ್ಯ ಗುರುಗಳಾದ ವಿದುಷಿ ಲಕ್ಷ್ಮಿ ಗುರುರಾಜ್ ಹಾಗೂ ವಿದುಷಿ ಶ್ರೀವಿದ್ಯಾ ಸಂದೇಶ್ ಉಪಸ್ಥಿತರಿದ್ದರು.