ಪುತ್ತೂರು: ಶತಮಾನದ ಸನಿಹದಲ್ಲಿರುವ ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ವಂದನೀಯ ಭಗಿನಿ ಡಾ. ಮಾರಿಯೆಟ್ ಬಿ ಎಸ್ ಭೇಟಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಹಾಗೂ ನಿಯೋಜಿತ ಮುಖ್ಯಶಿಕ್ಷಕಿ ಐರಿನ್ ವೇಗಸ್ ರವರ ನೇತೃತ್ವದಲ್ಲಿ ಮಕ್ಕಳು ಸ್ವಾಗತಿಸಿದರು.

ವೇದಿಕೆಯಲ್ಲಿ ಬೆಥನಿ ಸಂಸ್ಥೆಯ ಜನರಲ್ ಪ್ರೊಕ್ಯುರೇಟರ್ ವಂದನಿಯ ಭಗಿನಿ ವೈಲೆಟ್ ಬಿ ಎಸ್, ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಮೊಟ್ಟೆತಡ್ಕ,ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್, ನಿಯೋಜಿತ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್ ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ನಿಯೋಜಿತ ಮುಖ್ಯ ಶಿಕ್ಷಕಿ ಐರಿನ್ ವೇಗಸ್ ವಂದಿಸಿದರು. ಬಳಿಕ ಶಿಕ್ಷಕರ ಜೊತೆ ಸಂವಾದ ನಡೆಯಿತು. ಮಕ್ಕಳಿಂದ ಬೆಥನಿ ಸಂಸ್ಥೆಯ ಪ್ರಮುಖ ಆದ್ಯತೆಗಳ ಕಿರು ನಾಟಕ ಪ್ರದರ್ಶನ ನಡೆಯಿತು.