ಪೆರ್ಲಂಪಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಪುತ್ತೂರು ಇದರ ವತಿಯಿಂದ ಕೊಳ್ತಿಗೆ, ಪೆರ್ಲಂಪಾಡಿ, ಮೊಗಪ್ಪೆ ಒಕ್ಕೂಟಗಳ ಆಟಿಡೊಂಜಿ ದಿನ ಕಾರ್ಯಕ್ರಮ ಆ.10ರಂದು ಶ್ರೀ ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಜಿ ಕೆ, ಉದ್ಘಾಟನೆ ಶಾಲಾ ಮುಖ್ಯಗುರುಗಳು ಕೃಷ್ಣವೇಣಿ, ಸಂಪನ್ಮೂಲ ವ್ಯಕ್ತಿ ಶ್ಯಾಮ್ ಸುಂದರ್ ರೈ,ಹಾಗೂ ಷಣ್ಮುಖದೇವ ಪ್ರೌಢ ಶಾಲಾ ಸಂಚಾಲಕ ಶಿವರಾಮ್ ಭಟ್, ಗೌರವ ಉಪಸ್ಥಿತಿಯಲ್ಲಿದ್ದ ಗಣ್ಯರು, ದಕ್ಷಿಣ ಕನ್ನಡ-2 ಜಿಲ್ಲೆಯ ಜಿಲ್ಲಾ ನಿರ್ದೇಶಕರು ಬಾಬು ನಾಯ್ಕ, ತಾಲೂಕಿನ ಯೋಜನಾಧಿಕಾರಿ ಶಶಿಧರ್ ಎಮ್, ಬಾಯಂಬಾಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಗಂಗಾಧರ ಗೌಡ ಕೆಮ್ಮಾರ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ತೀರ್ಥನಂದ ದುಗ್ಗಲ, ಷಣ್ಮುಖದೇವ ಭಜನಾ ಮಂಡಳಿಯ ಅಧ್ಯಕ್ಷರು ಪ್ರವೀಣ್ ಕುಮಾರ್ ಜಿ ಕೆ,ಜನ ಜಾಗೃತಿಯ ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಸತೀಶ್ ಪಾಂಬರ್, ಪೆರ್ಲಂಪಾಡಿ ಬಿ ಒಕ್ಕೂಟದ ಅಧ್ಯಕ್ಷರು ತಿಮ್ಮಪ್ಪ ಗೌಡ, ಮೊಗಪ್ಪೆ ಒಕ್ಕೂಟದ ಅಧ್ಯಕ್ಷರು ವೇದಾವತಿ ಇವರು ಉಪಸ್ಥಿತರಿದ್ದರು.
ಗೌರವಾರ್ಪಣೆ (ಸನ್ಮಾನ) ಶಿವರಾಮ್ ಹೊಳ್ಳ ನಾಟಿ ವೈದ್ಯರು, ಪುರುಷೋತ್ತಮ ನಾಯ್ಕ ಮಾಲೆತೋಡಿ ತೆoಗಿನ ಗರಿಯ ಕಲೆಗಾರ, ಹಾಗೂ ದೈವದ ಸಂಧಿ ಮತ್ತು ಚಾಕಾರಿಯ ಗುಬ್ಬಿ, ಇವರನ್ನು ಗೌರವಿಸಲಾಯಿತು. ನಿರೂಪಣೆ ಕೆದಂಬಾಡಿ ವಲಯದ ಮೇಲ್ವಿಚಾರಕಿ ಶುಭವತಿ, ಸ್ವಾಗತ ರಾಮ ಪಾಂಬರ್, ವರಧಿವಾಚನ ಕೊಳ್ತಿಗೆ ಒಕ್ಕೂಟದ ಸೇವಾಪ್ರತಿನಿಧಿ ಶಾರದಾ ಮತ್ತು ಧನ್ಯವಾದ ಭವ್ಯಾಶ್ರೀ ಇವರು ನಡೆಸಿಕೊಟ್ಟರು. ಪೆರ್ಲಂಪಾಡಿ ಒಕ್ಕೂಟದ ಸೇವಾಪ್ರತಿನಿಧಿ ದಿವ್ಯ, ಮೊಗಪ್ಪೆ ಒಕ್ಕೂಟದ ಸೇವಾಪ್ರತಿನಿಧಿ ಅರುಣ, ಪದಾಧಿಕಾರಿ, ಉಪಸಮಿತಿ, ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.