ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಇತ್ತೀಚೆಗೆ ರೋಟರಿ ಮನೀಷಾ ಸಭಾಂಗಣದಲ್ಲಿ ಕರಾವಳಿಯಲ್ಲಿ ಅಡಿಕೆ ಬೆಳೆಗಳು, ಸವಾಲುಗಳು ಮತ್ತು ಅನುಕೂಲತೆಗಳು ಎಂಬ ಮಾಹಿತಿ ಶಿಬಿರ ನಡೆಯಿತು.
ಸಂಪನ್ಮೂಲ ವ್ಯಕ್ತಿ, ವಿಟ್ಲ ಸಿ.ಪಿ. ಸಿ. ಆರ್. ಐ ಸಂಸ್ಥೆಯ ವಿಜ್ಞಾನಿ ಡಾ. ಭವಿಷ್ಯರವರು, ಕರಾವಳಿಯಲ್ಲಿ ಅಡಿಕೆ ಮತ್ತು ಕೊಕ್ಕೋ ಬೆಳೆಗಳಲ್ಲಿ ಬೆಳೆ ಉತ್ಪಾದನಾ ವಿಷಯದಲ್ಲಿ ಮುಖ್ಯವಾಗಿ ಒಳಸುರಿಗಳ ಬಳಕಾ ಸಾಮರ್ಥ್ಯ ಹೆಚ್ಚಿಸುವ ಕ್ರಮಗಳು, ರೋಗ ಮತ್ತು ಪೋಷಕಾಂಶಗಳ ನಡುವಿನ ಸಂಬಂಧ, ಅಡಿಕೆ ಮತ್ತು ಕೊಕ್ಕೋ ಬೆಳೆಗಳಲ್ಲಿ ಪೋಷಕಾಂಶ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಅಡಿಕೆ ಮತ್ತು ಕೊಕ್ಕೋ ತೋಟಗಳಲ್ಲಿ ಇಂಗಾಲದ ಸ್ಥಿರೀಕರಣ ಸಾಮರ್ಥ್ಯ ಮತ್ತು ಅದನ್ನು ಹೆಚ್ಚಿಸುವ ಕ್ರಮಗಳು, ಅಡಿಕೆ ಮತ್ತು ಕೊಕ್ಕೋ ಬೆಳೆಗಳಿಗೆ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣ, ಪೋಷಕಾಂಶ ಮತ್ತು ರೋಗ ಇವುಗಳ ಸಂಬಂಧದ ಕುರಿತು ತನ್ನ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷರಾದ ಶಶಿಧರ್ ಕಿನ್ನಿಮಜಲ್ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಡಾ.ಶ್ಯಾಮ್ ಪ್ರಸಾದ್ ಅತಿಥಿಗಳ ಪರಿಚಯ ಮಾಡಿದರು. ವೇದಿಕೆಯಲ್ಲಿ ನಿಯೋಜಿತ ಅಧ್ಯಕ್ಷ ರವಿಕುಮಾರ್ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು.