ಪುತ್ತೂರು; “ಶಿವಳ್ಳಿ ಸಂಪದ ” ಬೊಳುವಾರು ವಲಯದ ವತಿಯಿಂದ ಶ್ರೀ ಮದ್ಭಾಗವತ ಸಪ್ತಾಹವು ಇದೇ ತಿಂಗಳ ಆ.16 ರಿಂದ 22 ರವರೆಗೆ ಕೆಮ್ಮಾಯಿ ವಿಷ್ಣು ಮಂಟಪದಲ್ಲಿ ನಡೆಯಲಿದೆ.
ಆ.16 ರ ಸಂಜೆ 4.30 ರ ಸಮಯ ಬೊಳುವಾರು ವಲಯ ಸಂಪದದ ಗೌರವ ಅಧ್ಯಕ್ಷ, ಜಿ.ಎಲ್ .ಸಮೂಹ ಸಂಸ್ಥೆಗಳ ಮಾಲಕ ಬಲರಾಮ್ ಆಚಾರ್ಯ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಪ್ರಗತಿ ಆಸ್ಪತ್ರೆಯ ಡಾ| ಶ್ರೀಪತಿರಾವ್, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ| ಬೆ.ನಾ.ವಿಜಯೀಂದ್ರ ಆಚಾರ್ಯ ಮೈಸೂರು ಇವರು 7 ದಿನಗಳ ಕಾಲ ಬಾಗವತ ಪ್ರವಚನ ನಡೆಸಲಿದ್ದಾರೆ.ಪ್ರತೀ ದಿನ ಸಂಜೆ ಗಂಟೆ 5.30ರಿಂದ 7.30.ರ ವರೆಗೆ ನಡೆಯಲಿದ್ದು ಸಪ್ತಾಹ ಸಮಾಪ್ತಿಯ ದಿನ ಆ .22ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಚಕ್ರಾಬ್ಜ ಮಂಡಲ ಪೂಜೆ, ಅಷ್ಟಾವಧಾನ ಸೇವೆ, ಪ್ರವಚನದ ಸಮಾಪ್ತಿಯ ಜೊತೆ, ಸರಳ ಸಮಾರೋಪ ಸಮಾರಂಭದ ಮೂಲಕ ಮುಕ್ತಾಯಗೊಳ್ಳಲಿದೆ.
ಸಮಾರೋಪ ಸಮಾರಂಭದಲ್ಲಿ ಉಡುಪಿಯ ಶ್ರೀಮನ್ ಮದ್ವ ಸಿದ್ದಾಂತ ಪ್ರಭೋದಕ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ|ಷಣ್ಮುಖ ಹೆಬ್ಬಾರ್ ಸಮಾರೋಪ ಭಾಷಣ ಮಾಡಲಿದ್ದು , ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಇತರ ಗಣ್ಯರ ಉಪಸ್ತಿತಿಯಲ್ಲಿ ಪ್ರವಚನಕಾರ ಡಾ| ಬೆ.ನಾ.ವಿಜಯೀಂದ್ರ ಅಚಾರ್ಯ ಮೈಸೂರು ಇವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಎಂದು ಶಿವಳ್ಳಿ ಸಂಪದ ಬೊಳುವಾರು ವಲಯದ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.