ಪುತ್ತೂರು: ದಕ್ಷಿಣ ಭಾರತ ಶೈಲಿಯ ಖಾದ್ಯಗಳನ್ನು ಒಳಗೊಂಡ ವೆಜ್ ಥಾಲಿ, ಚಿಕನ್ ಥಾಲಿ ಮತ್ತು ಫಿಶ್ ಥಾಲಿ ಕುಂಬ್ರದ ಅಲ್ರಾಯ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಆರಂಭಗೊಂಡಿದೆ. ಪುತ್ತೂರಿನ ಹೊಟೇಲ್ ಇತಿಹಾಸದಲ್ಲೇ ಪ್ರಪ್ರಥಮವಾಗಿ ಈ ಥಾಲಿ ಊಟದ ತಟ್ಟೆಯ ಶೈಲಿಯನ್ನು ಅಲ್ರಾಯ ಪರಿಚಯಿಸುತ್ತಿದೆ. ಈಗಾಗಲೇ ಮಂಗಳೂರು, ಮಡಿಕೇರಿ, ಮೈಸೂರು ಭಾಗಗಳಲ್ಲಿ ಕೆಲವೊಂದು ಹೊಟೇಲ್ಗಳಲ್ಲಿ ಮಾತ್ರ ಲಭ್ಯವಿರುವ ಈ ಥಾಲಿ ಶೈಲಿಯನ್ನು ಪುತ್ತೂರಿನ ಗ್ರಾಹಕರಿಗೂ ಪರಿಚಯಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಅಲ್ರಾಯ ಫ್ಯಾಮಿಲಿ ರೆಸ್ಟೋರೆಂಟ್ ಮಾಲಕರು ತನ್ನ ಹೊಟೇಲ್ನಲ್ಲಿ ಆರಂಭಿಸಿದ್ದಾರೆ.
ಏನಿದು ಥಾಲಿ ಶೈಲಿಯ ಊಟ…?
ಸಾಮಾನ್ಯವಾಗಿ ನಾವು ಹೊಟೇಲ್ಗೆ ಹೋದಾಗ ನಮಗೆ ಊಟ ಬೇಕು ಎಂದರೆ ಊಟ,ಪಲ್ಯ,ಸಾಂಬಾರ್ ಹಾಗೇ ನಾನ್ವೆಜ್ ಬೇಕೆಂದರೆ ನಮಗೆ ಬೇಕಾಗಿರುವುದನ್ನು ತಂದಿಡುತ್ತಾರೆ. ಆದರೆ ಈ ಥಾಲಿ ಶೈಲಿಯಲ್ಲಿ ಒಂದೇ ತಟ್ಟೆಯಲ್ಲಿ ನಮಗೆ ಹೊಟ್ಟೆ ತುಂಬಾ ಖಾದ್ಯಗಳು ಸಿಗುತ್ತವೆ. ನಮಗೆ ಮೀನಿನ ಖಾದ್ಯ ಬೇಕೋ ಅಥವಾ ಚಿಕನ್ನಾ ಅಥವಾ ತರಕಾರಿಯಾ ಯಾವುದು ಎಂದು ಹೇಳಿದರೆ ಸಾಕಾಗುತ್ತದೆ. ದಕ್ಷಿಣ ಭಾರತ ಶೈಲಿಯಲ್ಲಿ ಖಾದ್ಯಗಳು ಸಿಗಲಿದ್ದು ಒಂದೇ ತಟ್ಟೆಯಲ್ಲಿ ಹೊಟ್ಟೆ ತುಂಬಾ ಊಟ ಸಿಗಲಿದೆ.
ಥಾಲಿಯಲ್ಲಿ ಏನೇನಿದೆ ಗೊತ್ತಾ…?
ಫಿಶ್ ಥಾಲಿಯಲ್ಲಿ ಮೀನಿನ ಖಾದ್ಯ, ಚಿಕನ್ ಥಾಲಿಯಲ್ಲಿ ಚಿಕನ್ ಖಾದ್ಯ ಹಾಗೇ ತರಕಾರಿ ಥಾಲಿಯಲ್ಲಿ ತರಕಾರಿ ಖಾದ್ಯಗಳಿರಲಿದೆ. ವೆಜ್ ಥಾಲಿಯಲ್ಲಿ ಕುಚಲಕ್ಕಿ ಅನ್ನ, ಪನ್ನೀರ್ ಮಸಾಲ, ಗೋಬಿ ಚಿಲ್ಲಿ,ವೆಜ್ ಕುರ್ಮ, ಸಾಂಬಾರ್,ಸ್ವೀಟ್ ಪಾಯಸ, ರಸಂ, ಪಲ್ಯ, ಪರೋಟ ಮತ್ತು ಪಪ್ಪಡ್ ಇರಲಿದೆ. ವೆಜ್ ಥಾಲಿಗೆ ಕೇವಲ ರೂ.110 ಮಾತ್ರ ಇರಲಿದೆ. ಅದೇ ರೀತಿ ಚಿಕನ್ ಥಾಲಿಯಲ್ಲಿ ಕುಚಲಕ್ಕಿ ಅನ್ನ , 2 ಪೀಸ್ ಚಿಕನ್ ಕಬಾಬ್, 1 ಪೀಸ್ ಚಿಕನ್ ಮಸಾಲ, 1 ಪೀಸ್ ಚಿಕನ್ ಸುಕ್ಕ, ಪಲ್ಯ, ರಸಂ, ಸ್ವೀಟ್ ಪಾಯಸ, ಪರೋಟ, ಉಪ್ಪಿನಕಾಯಿ, ಪಪ್ಪಡ್ ಇರಲಿದ್ದು ಇದಕ್ಕೆ ಕೇವಲ ರೂ.130 ಇರಲಿದೆ. ಇನ್ನು ಫಿಶ್ ಥಾಲಿಯಲ್ಲಿ ಕುಚಲಕ್ಕಿ ಅನ್ನ , 2 ಬೂತಾಯಿ ತವಾ ಫ್ರೈ, ಫಿಶ್ ಗ್ರೇವಿ, ವೆಜ್ ಕುರ್ಮ, ರಸಂ, ಸ್ವೀಟ್ ಪಾಯಸ, ಪರೋಟ, ಉಪ್ಪಿನಕಾಯಿ, ಪಪ್ಪಡ್ ಇರಲಿದ್ದು ಇದಕ್ಕೆ ರೂ.90 ಮಾತ್ರ ಇರಲಿದೆ.
ಕುಂಬ್ರದಲ್ಲೇ ಪ್ರಥಮ
ಈ ರೀತಿಯ ಥಾಲಿ ಶೈಲಿಯ ಊಟವನ್ನು ನಾವು ಮಂಗಳೂರಿನ ಕೆಲವೊಂದು ಸೀಮಿತ ಹೊಟೇಲ್ಗಳಲ್ಲಿ ಕಾಣಬಹುದಾಗಿದೆ ಹಾಗೇ ಮಡಿಕೇರಿ,ಮೈಸೂರು, ಬೆಂಗಳೂರು ಇತ್ಯಾದಿ ಕಡೆಗಳಲ್ಲಿ ಹೆಚ್ಚು ಪ್ರಚಲಿತವಿದೆ. ಮಂಗಳೂರು ಬಿಟ್ಟರೆ ಬಹುಷಹ ಕುಂಬ್ರದಲ್ಲೆ ಇದು ಪ್ರಥಮ ಎನ್ನಬಹುದಾಗಿದೆ. ಇಲ್ಲಿನ ಅಲ್ರಾಯ ಫ್ಯಾಮಿಲಿ ರೆಸ್ಟೋರೆಂಟ್(ಹವಾ ನಿಯಂತ್ರಿತ)ನಲ್ಲಿ ಥಾಲಿ ಶೈಲಿಯ ಉಟವನ್ನು ಆರಂಭಿಸಲಾಗಿದ್ದು ಆ ಮೂಲಕ ಈ ಭಾಗದ ಗ್ರಾಹಕರಿಗೆ ಪರಿಚಯಿಸಲಾಗಿದೆ.

ಹೀಗೆ ಬನ್ನಿ
ಅಲ್ರಾಯ ಫ್ಯಾಮಿಲಿ ರೆಸ್ಟೋರೆಂಟ್(ಹವಾನಿಯಂತ್ರಿತ) ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎದುರುಭಾಗದಲ್ಲಿರುವ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ನಲ್ಲಿದೆ. ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಪುತ್ತೂರಿನಿಂದ 10 ಕಿ.ಮೀ ಹಾಗೇ ಸುಳ್ಯದಿಂದ ಪುತ್ತೂರಿಗೆ ಬರುವಾಗ 25 ಕಿ.ಮೀ ದೂರದಲ್ಲಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಶುಚಿತ್ವಕ್ಕೆ ಪ್ರಥಮ ಆದ್ಯತೆಯನ್ನು ನೀಡುತ್ತಿರುವ ಅಲ್ರಾಯ ರೆಸ್ಟೋರೆಂಟ್ ಗ್ರಾಹಕರಿಂದಲೇ ಪ್ರಶಂಸೆಯನ್ನು ಪಡೆದುಕೊಂಡಿದೆ. ಖಾದ್ಯಗಳನ್ನು ಆರ್ಡರ್ ಮಾಡಲು ಮೊ.9535627300ಗೆ ಸಂಪರ್ಕಿಸಬಹುದಾಗಿದೆ.