ಪೆರಾಬೆ: ಎ ಮತ್ತು ಬಿ ಜುಮಾ ಮಸೀದಿ ಕುಂತೂರು ಬೇಳ್ಪಾಡಿ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಕುಂತೂರು ಇದರ ವತಿಯಿಂದ ನಡೆದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎ ಮತ್ತು ಬಿ ಜುಮಾ ಮಸೀದಿ ಉಪಾಧ್ಯಕ್ಷರಾದ ಅಯ್ಯೂಬ್ ನೆರವೇರಿಸಿದರು.
ಜಮಾಅತ್ ಮುದರ್ರಿಸ್, ಖತೀಬರೂ ಆದ ಉಸ್ತಾದ್ ಅಲ್ ಹಾಜ್ ಮೊಯ್ದು ಫೈಝಿ ಉಸ್ತಾದ್ ಆರಂಭಿಕ ಪ್ರಾರ್ಥನೆಗೆ ನೇತೃತ್ವ ನೀಡಿದರು. ಮದ್ರಸ ಮುಖ್ಯೋಪಾಧ್ಯಾಯರಾದ ಹಾಶಿಂ ರಹ್ಮಾನಿ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ಮುಹಮ್ಮದ್ ಅಸ್ಲಮಿ, ಜಮಾಅತ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕೋಚಕಟ್ಟೆ, ಕೋಶಾಧಿಕಾರಿ ಅಬ್ದುಲ್ಲ ಕೆ.ಎಲ್.ಬಿ, ಎಸ್.ವೈ.ಎಸ್ ಕುಂತೂರು ಅಧ್ಯಕ್ಷರಾದ ಅಬ್ದುಲ್ಲ ಹಾಜಿ ಮರುವಂತಿಲ, ಪ್ರಧಾನ ಕಾರ್ಯದರ್ಶಿ ಶರೀಫ್ ಮಶ್ರಿಕ್, ಎಸ್.ಕೆ.ಎಸ್.ಎಸ್.ಎಫ್ ಕುಂತೂರು ಶಾಖೆ ಅಧ್ಯಕ್ಷರಾದ ಮುಹಮ್ಮದಲಿ ಕೋಚಕಟ್ಟೆ, ಜಮಾಅತ್ ಸಮಿತಿ ಪದಾಧಿಕಾರಿಗಳಾದ ಅಬ್ಬಾಸ್ ಕೋಚಕಟ್ಟೆ, ಹಮೀದ್ ಚಾಲ್ಕೆರೆ, ಪುತ್ತುಮೋನು ಮುಡುಪಿನಡ್ಕ, ರಶೀದ್ ಕುಂತೂರು, ಹನೀಫ್ ಅಲ್‌ಕೌಸರ್, ಮುಸ್ತಫ ಎರ್ಮಾಳ, ಇಸ್ಮಾಯಿಲ್ ಅಲ್ ಅಮೀನ್ ಸಹಿತ ವಿವಿಧ ಗಣ್ಯರು, ಊರಿನ ಬಾಂಧವರು, ದರ್ಸ್ ಹಾಗೂ ಮದ್ರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸ್ವಾತಂತ್ರೋತ್ಸವ ಪ್ರಯುಕ್ತ ಮದ್ರಸದ ಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಕ್ರಮವಾಗಿ ಫಾತಿಮತ್ ಇಫ್ರಾನ, ಮುಹಮ್ಮದ್ ಮಿಖ್ದಾದ್, ಆಶಿರ್ ಹಾಗೂ ಮುಹಮ್ಮದ್ ಇಫ್ನಾನ್ ಪಡೆದು ಬಹುಮಾನ ಸ್ವೀಕರಿಸಿದರು. ಎಸ್.ವೈ.ಎಸ್ ಕುಂತೂರು ಶಾಖೆ ಬಹುಮಾನದ ಪ್ರಾಯೋಜಕತ್ವ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಹಾರಿಸ್ ತಕ್ದೀರ್ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು. ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡಿದರು. ಮದ್ರಸ ಮುಖ್ಯೋಪಾಧ್ಯಾಯ ಹಾಶಿಂ ರಹ್ಮಾನಿಯವರು ರಾಷ್ಟ್ರಗೀತೆ ಹಾಡಿದರು.