ಸ್ವಾತಂತ್ರ್ಯೋತ್ಸವವನ್ನು ವಿಭಿನ್ನ ರೀತಿ ಆಚರಿಸಿ ಮಾದರಿಯೆನಿಸಿಕೊಂಡ ದ. ಕ ಮ್ಯೂಚುವಲ್ ಬೆನಿಫಿಟ್ ನಿಧಿ
ಪುತ್ತೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬರೀ 4 ವರುಷಗಳ ಕಾಲಾವಧಿಯಲ್ಲಿ ಅತ್ಯಂತ ವೇಗವಾಗಿ ಜೊತೆಗೆ ತುಂಬಾನೇ ನಿರಾಯಾಸವಾಗಿ 17 ಶಾಖೆಗಳನ್ನು ಹೊಂದಿರುವ, ಸಮಾರು 170 ಕ್ಕೂ ಮೀರಿ ಸಿಬ್ಬಂದಿಗಳನ್ನು, 12 ಸಾವಿರಕ್ಕೂ ಮೀರಿ ಗ್ರಾಹಕರ ವರ್ಗವನ್ನು ಹೊಂದಿ, 50 ಕೋಟಿ ರೂಪಾಯಿಗಳಷ್ಟೂ
ವ್ಯವಹಾರವನ್ನು ಅತ್ಯಂತ ನಿಷ್ಠೆ ಪ್ರಾಮಾಣಿಕತೆ ಮೂಲಕ ಗ್ರಾಹಕ ವರ್ಗದ ವಿಶ್ವಾಸಾರ್ಹ ಸಂಸ್ಥೆಯೆಂದೇ ಗುರುತಿಸಿಕೊಂಡಿರುವ, ಮೂಡಬಿದ್ರೆಯಲ್ಲಿ ಪ್ರಧಾನ ಶಾಖೆ ಇರುವ ಭಾರತ ಸರಕಾರದ ಕಾರ್ಪೊರೇಟ್ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಲ್ಪಟ್ಟು ವ್ಯವಹರಿಸುತ್ತಿರುವ ಬೊಳುವಾರು ಇನ್ ಲ್ಯಾಂಡ್ ಮಯೂರ ಸಂಕೀರ್ಣ ಇಲ್ಲಿ ಶಾಖೆ ಹೊಂದಿರುವ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ ಪ್ರಥಮ ವಾರ್ಷಿಕೋತ್ಸವನ್ನು ಬಡ ಕುಟುಂಬಕ್ಕೆ ಆರ್ಥಿಕ ಸಹಾಯಹಸ್ತ ನೀಡುವ ಮೂಲಕ ಆಚರಣೆ ಮಾಡಿಕೊಂಡಿತ್ತು.
ಇದೀಗ ಭಾರತೀಯರೆಲ್ಲರೂ ಸಂಭ್ರಮಿಸುವಂತಹ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿವೃತ್ತ ಸೈನಿಕರಿಗೆ ಮತ್ತು ಪ್ರಸ್ತುತ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಗೌರವ ವಂದನೆ ಹಾಗೂ ಸಂಸ್ಥೆಯ ಅದೃಷ್ಟವಂತ ಗ್ರಾಹಕರಿಗೆ ಚಿನ್ನದ ನಾಣ್ಯ ಕೊಡುಗೆ ಆಯೋಜನೆ ಮೂಲಕ ಮತ್ತೆ ವಿಭಿನ್ನ ಮಾದರಿ ಕಾರ್ಯಕ್ರಮವನ್ನು ಅ.14 ರಂದು ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ಏರ್ಪಡಿಸಿತು.
ಈ ಅದ್ದೂರಿ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರಿನಲ್ಲಿರುವ ಮಾಜಿ ಸೈನಿಕರ ಸಂಘ ಇದರ ಅಧ್ಯಕ್ಷ ವಸಂತ್ ಕುಮಾರ್ ಬಿ ದೀಪ ಪ್ರಜ್ವಲನೆ ನೆರವೇರಿಸಿದರು. ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ ನಾರಯಣ ಭಟ್ ಮಾತನಾಡಿದ ಅವರು , ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ಪ್ರಜೆಗಳಲ್ಲಿ ಯಾವುದೇ ಹಕ್ಕುಗಳಿರಲಿಲ್ಲ. 1947 , ಆಗಸ್ಟ್ 15ರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರ ವಾಯಿತು. ಸ್ವಾತಂತ್ರ್ಯವು ದೇಶದ ಜನರಿಗೆ ಶಕ್ತಿಯನ್ನು ನೀಡಿದ್ದು , ಜೊತೆಗೆ ಸಂವಿಧಾನ ರಚನೆಯ ಮೂಲಕ ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ನೀಡಲಾಯಿತು , ಮತದಾನದ ಮೂಲಕ ಸರ್ಕಾರದ ರಚನೆ , ದೇಶದ ಭದ್ರ ಬುನಾದಿಗೆ ಶಿಕ್ಷಣಕ್ಕೆ ಒತ್ತು , ಇವೆಲ್ಲದರ ಮೂಲಕ ದೇಶವು ಅಭಿವೃದ್ಧಿ ಪಥ ಕಂಡು , ಇದೀಗ ಜಗತ್ತಿನಲ್ಲಿಯೇ ನಾಲ್ಕನೆಯ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿ ಮುನ್ನುಗಿದೆಯೆಂದು ವಿವರಿಸಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಬಿ ಮಾತನಾಡಿ , ರಾಷ್ಟ್ರದ ರಕ್ಷಣೆಗಾಗಿ ಹುತಾತ್ಮರಾದವರನ್ನೂ ನಾವೆಲ್ಲರೂ ಎಂದಿಗೂ ಸ್ಮರಿಸಬೇಕು ಮಾತ್ರವಲ್ಲದೇ ಮುಂದಿನ ಪೀಳಿಗೆಗೂ ಅವರ ಬಲಿದಾನವನ್ನು ತಿಳಿಸೋ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ಕೆದಂಬಾಡಿ ರಾಮಯ್ಯ , ಎನ್ ಎಸ್ ಕಿಲ್ಲೆ ಸಹಿತ ಹಲವರು ವೀರ ಯೋಧರ ಪುತ್ಥಳಿಗಳನ್ನು ನಿರ್ಮಿಸೋ ಬಗ್ಗೆಯು ಮಾತುಕತೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು, ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದರು.
ಉಪಾಧ್ಯಕ್ಷ ಸುಂದರ ಗೌಡ ಕೆ ನಡುಬೈಲು ಮಾತನಾಡಿ , ಇಂದು ನಾವು ಇಂತಹ ಸಂಭ್ರಮ ಕಾಣಲು ನಮ್ಮ ಪೂರ್ವಜರೇ ಕಾರಣ.ಅವರ ಬಲಿದಾನ,ತ್ಯಾಗದಿಂದಲೇ ನಮ್ಮೆಲ್ಲರಿಗೂ ಸ್ವಾತಂತ್ರ್ಯ ಬಂದಿರುವುದು. ದುರಾದೃಷ್ಟವೇನೆಂದರೇ , ದೇಶಕ್ಕೆ ಹೊರ ಶತ್ರುವಿಗಿಂತ ಒಳ ಶತ್ರುಗಳೇ ಮಾರಕವಾಗಿದ್ದರೆ. ಇದಕ್ಕೆಲ್ಲ ದೇಶಾಭಿಮಾನದ ಕೊರತೆ ಕಾರಣವಾಗಿದ್ದು , ಈ ಸಂಸ್ಥೆಯಿಂದ ಆಯೋಜನೆಗೊಂಡಿರುವ ಇಂತಹ ಅದ್ಬುತ ಕಾರ್ಯದಿಂದ ಎಲ್ಲೆಡೆ ದೇಶಾಭಿಮಾನ ಮೂಡಲು ಸಾಧ್ಯವೆಂದು ಹೇಳಿದರು.
ಮಾಜಿ ಸೈನಿಕ ವಸಂತ ಗೌಡ ದೇವಸ್ಯ ಕೂಡ ಹಾರೈಸಿದರು.
ವೇದಿಕೆಯಲ್ಲಿ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಕಂದ ರಾಜ್ ಹಾಗೂ ಸಂಸ್ಥೆಯ ಶಾಖಾ ಅಧ್ಯಕ್ಷ ಪುನೀತ್ ವಿ.ಜೆ ಹಾಜರಿದ್ದರು.
ಬಳಿಕ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಕಂದ ರಾಜ್ ಇವರನ್ನು ಎಲ್ಲಾ ಅತಿಥಿಗಳ ಮುಖೇನ ಗೌರವಿಸಿ, ಸನ್ಮಾನಿಸಲಾಯಿತು.
ಬಳಿಕ ವೇದಿಕೆಯಲ್ಲಿದ್ದ ಅತಿಥಿಗಳ ಸಹಿತ ಎಲ್ಲಾ ಯೋಧರನ್ನೂ ಸಂಸ್ಥೆಯ ಪರವಾಗಿ ಶಾಖಾ ಅಧ್ಯಕ್ಷ ಪುನೀತ್ ವಿ.ಜೆ ಗೌರವಿಸಿ, ವಂದಿಸಿದರು.ಆ ಬಳಿಕ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಸಲುವಾಗಿ ಆಯೋಜಿಸಿದ್ದ ಚಿನ್ನದ ನಾಣ್ಯ ಕೊಡುಗೆ ಜೊತೆಗೆ ಆಕರ್ಷಕ ಬಹುಮಾನ ವಿಜೇತರ ಆಯ್ಕೆಯನ್ನು ವೇದಿಕೆಯಲ್ಲಿದ್ದ ಅತಿಥಿಗಳ ಮುಖೇನ ಚೀಟಿ ಆಯ್ಕೆ ಮೂಲಕ ಆರಿಸಲಾಯಿತು. ಚಿನ್ನದ ನಾಣ್ಯ ಕೊಡುಗೆ ಕಿಶನ್ ಕುಮಾರ್ ಎಂ ಉಪ್ಪಿನಂಗಡಿ ಪಡೆದರೇ, ಆಕರ್ಷಕ ಬಹುಮಾನವನ್ನು ದೇವಕಿ ಪುತ್ತೂರು , ದೀಪಕ್ ಪುತ್ತೂರು ಮತ್ತು ಮಹಾಬಲ ಶೆಟ್ಟಿ ಗೋಳಿತೊಟ್ಟು ಹಾಗೂ ಗೀತಾ ಶೆಟ್ಟಿ ಮಂಗಳೂರು ಇವರುಗಳು ಪಡೆದುಕೊಂಡರು.
1971 ರ ಬಾಂಗ್ಲಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ ಡಿ.ಅಮ್ಮಣ್ಣ ರೈಯವರ ಸಹಿತ ವೆಂಕಪ್ಪ ಗೌಡ , ಜಯಂತ್ ಬೇಕಲ್ ,ಚಂಚಲಾಕ್ಷ ,ಉದನೇಶ್ವರ್ ,ಸುಂದರ ಗೌಡ ,ಚಂದ್ರಶೇಖರ್ ಗೌಡ ,ವಸಂತ್ ಕುಮಾರ್ ಹೆಚ್ ಹಾಗೂ ವಾಯುಸೇನೆಯ ರಾಮಚಂದ್ರ ಪೂಜಾರಿ ಮೊದಲಾದ ಯೋಧರನ್ನು ಕೂಡ ಗೌರವಿಸಲಾಯಿತು.
ಸಂಸ್ಥೆಯ ಸಿಬಂದಿ ಸುಶ್ಮೀತಾ ಮತ್ತು ಬಿಂದ್ಯಾ ಪ್ರಾರ್ಥನೆ ನೆರವೇರಿಸಿ , ಅರ್ಪಿತಾ ,ಪೂಜಾ , ವೀಕ್ಷಿತಾ ,ರಕ್ಷಿತಾ ಹಾಗೂ ಸುಶ್ಮೀತಾ ಅತಿಥಿಗಳನ್ನು ಸ್ವಾಗತಿಸಿದರು.ಪುನೀತ್ ಕುಮಾರ್ ಕೆ.ವಿ ಕಾರ್ಯಕ್ರಮ ನಿರೂಪಿಸಿ , ಸುಶ್ಮೀತಾ ವಂದಿಸಿದರು.
79ನೇಯ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಿವೃತ್ತ ಯೋಧರಿಗೆ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದೆ. ವಾರ್ಷಿಕ ಠೇವಣಿ ಮೇಲೆ 12.5% ಬಡ್ಡಿಯನ್ನು ನೀಡುವ ವಾಗ್ದಾನ ಮಾಡಿದ್ದು , ಹಿರಿಯ ನಾಗರಿಕರಿಗೂ ಕೂಡ ಅಷ್ಟೇ ಬಡ್ಡಿಯನ್ನು ನೀಡುವುದಾಗಿ ಹೇಳಿ ಕೊಂಡಿದೆ. ಇಷ್ಟೇಯಲ್ಲದೇ ಉಳಿತಾಯ ಖಾತೆ ,ನಿಶ್ಚಿತ ಠೇವಣಿ ಸೌಲಭ್ಯ ,ದೈನಂದಿನ ಖಾತೆ ,ರಿಕರಿಂಗ್ ಠೇವಣಿ ಹಾಗು ಮಾಸಿಕ ಆದಾಯ ಖಾತೆ ಸೌಲಭ್ಯ ಸಂಸ್ಥೆಯಿಂದ ಲಭ್ಯವಿವೆ. ಇನ್ನೂ ಮಾಹಿತಿಗಾಗಿ 8951658767 ಅಥವಾ 9980258273 ಸಂಪರ್ಕಿಸುವಂತೆ ಶಾಖೆಯ ಅಧ್ಯಕ್ಷ ಪುನೀತ್ ವಿ.ಜೆ ವಿನಂತಿಸಿದ್ದಾರೆ.