ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಎಲಿಯ ಸರ್ವೆ ಇಲ್ಲಿ 79ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಮರಾಟಿ ಯುವ ವೇದಿಕೆ ಕೊಂಬೆಟ್ಟು, ಪುತ್ತೂರು ಇದರ ಮಾಜಿ ಅಧ್ಯಕ್ಷರು, ಶ್ರೀ ಸುಬ್ರಮಣ್ಯೇಶ್ವರ ದೇವಸ್ಥಾನ ಸರ್ವೆ ಇದರ ವ್ಯವಸ್ಥಾಪನ ಸಮಿತಿಯ ಸದಸ್ಯರು ಆದ ಶ್ರೀ ಅಶೋಕ ನಾಯ್ಕ ಸೊರಕೆ ಧ್ವಜಾರೋಹಣ ನೆರವೇರಿಸಿದರು.
ಮುಂಡೂರು ಪಂಚಾಯತ್ ಸದಸ್ಯರಾದ ಕರುಣಾಕರ ಗೌಡ ಎಲಿಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ವೆ ವಲಯ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ಸಂದರ್ಭೋಚಿತವಾಗಿ ಮಾತನಾಡಿದರು.
ಸೂರ್ಯೋದಯ ಸ್ವಸಹಾಯ ಸಂಘದ ಅಧ್ಯಕ್ಷ ರಾಮಣ್ಣ ನಾಯ್ಕ ಎಲಿಯ,ಸಂಘದ ಕಾರ್ಯದರ್ಶಿ ನವೀನ ನಾಯ್ಕ ಸೊರಕೆ,ಮಾಜಿ ಅಧ್ಯಕ್ಷರಾದ ಪದ್ಮಯ್ಯ ನಾಯ್ಕ ನೆಕ್ಕಿಲು, ನಿಯೋಜಿತ ಅಧ್ಯಕ್ಷ ಸುಂದರ ನಾಯ್ಕ ಎಲಿಯ ನೆಕ್ಕಿಲು, ರವಿಕುಮಾರ್ ಎಲಿಯ ,ಸ್ವಸ್ತಿಕ್ ಫ್ರೆಂಡ್ಸ್ ನೆಕ್ಕಿಲು ಇದರ ಅಧ್ಯಕ್ಷರಾದ ನವೀನ ನಾಯ್ಕ ನೆಕ್ಕಿಲು, ಹರೀಶ್ ನಾಯ್ಕ ಎಲಿಯ, ರಾಮಣ್ಣ ನಾಯ್ಕ ನೆಕ್ಕಿಲು, ಕೌಶಿಕ್ ಎಲಿಯ, ಹೇಮಚಂದ್ರ ನೆಕ್ಕಿಲು,ಹೇಮಂತ್ ಎಲಿಯ,ಚೇತನ್ ಕಲ್ಪಣೆ, ಪ್ರದೀಪ್ ನಾಯ್ಕ ನೆಕ್ಕಿಲು,ಪ್ರಣಾಮ್ ನೆಕ್ಕಿಲು,ಭರತ್ ನೆಕ್ಕಿಲು,ಶಿವರಾಜ್ ಕಲ್ಪಣೆ, ಸುಬ್ರಹ್ಮಣ್ಯ ಶರತ್ ನೆಕ್ಕಿಲು ,ಭಾಸ್ಕರ ಕೊಡಂಕಿರಿ ಉಪಸ್ಥಿತರಿದ್ದರು.
ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು, ಪುತ್ತೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯ ಗಿರೀಶ್ ನಾಯ್ಕ ಸೊರಕೆ ಕಾರ್ಯಕ್ರಮ ನಿರೂಪಿಸಿದರು.ಸೂರ್ಯೋದಯ ಸ್ವಸಹಾಯ ಸಂಘದ ಸದಸ್ಯ ಹರೀಶ್ ಗೌಡ ಎಲಿಯ ಧನ್ಯವಾದ ಅರ್ಪಿಸಿದರು ಮರಾಟಿ ಸಂಘ ಎಲಿಯ ಮತ್ತು ಸೂರ್ಯೋದಯ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.