ಅರಿಯಡ್ಕ ಪಲ್ಲಮದಕ ಅಮೃತ ಸರೋವರ ವಠಾರದಲ್ಲಿ 79 ನೇ ಸ್ವಾತಂತ್ರೋತ್ಸವ

0

ಅರಿಯಡ್ಕ:ಅರಿಯಡ್ಕ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೌಡಿಚ್ಚಾರು ಪಲ್ಲ ಮದಕ ಅಮೃತ ಸರೋವರದ ವಠಾರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ನಿವೃತ್ತ ಸೈನಿಕ ವಿಶ್ವನಾಥ ಪಾಪೆ ಮಜಲು ನೆರವೇರಿಸಿದರು. ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಸ್ವಾತಂತ್ರ್ಯೋತ್ಸವದ ಬಗ್ಗೆ ಉಪನ್ಯಾಸ ನೀಡಿದರು.

ಪಂಚಾಯತ್‌ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು, ಪಂಚಾಯತ್ ಸದಸ್ಯರು, ಪಂಚಾಯತ್ ಮಾಜಿ ಸದಸ್ಯರು,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇದರ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ, ಮತ್ತು ಶಿಕ್ಷಕ ವೃಂದ,ಎಸ್.ಡಿ.ಎಂ.ಸಿ ಅಧ್ಯಕ್ಷ ಅಪ್ಪಯ್ಯನಾಯ್ಕ,ಶಾಲಾ ವಿದ್ಯಾರ್ಥಿಗಳು,ಅರಣ್ಯ ಇಲಾಖೆ ಸಿಬ್ಬಂದಿಗಳು, ಶ್ರೀ ಕೃಷ್ಣ ಭಜನಾ ಮಂದಿರದ‌ ಪದಾಧಿಕಾರಿಗಳು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು,ನಾಗನ ಕಟ್ಟೆ ಸಮಿತಿ ಪದಾಧಿಕಾರಿಗಳು,ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು,ವಾಹನ ಚಾಲಕ ಮಾಲಕರ ಸಂಘದ ಸದಸ್ಯರು,ಕೋಟಿ ಚೆನ್ನಯ ಗೆಳೆಯರ ಬಳಗದ ಪದಾಧಿಕಾರಿಗಳು, ವಿವೇಕಾನಂದ ಯುವಕ ವೃಂದ ರಿ ಕೌಡಿಚ್ಚಾರು ಇದರ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.


ಆಕರ್ಷಣಿಯ ಮೆರವಣಿಗೆ…….
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಪೆಮಜಲು ಇಲ್ಲಿಯ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಸದಸ್ಯರುಗಳು, ಸಾರ್ವಜನಿಕರು ಜಯ‌ ಘೋಷಣೆಯೊಂದಿಗೆ ಕೌಡಿಚ್ಚಾರು ಪಲ್ಲಮದಕ ಅಮೃತ ಸರೋವರ ತನಕ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳು ಹಾಕಿದ ರಾಷ್ಟ್ರ ನಾಯಕರುಗಳ ವೇಷ ಮನಸಾರೆ ಗೊಂಡವು.ವರ್ತಕರು ಸಿಹಿ ತಿಂಡಿ ವಿತರಿಸಿದರು. ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಸ್ವಾಗತಿಸಿ, ಕಾರ್ಯದರ್ಶಿ ವಿದ್ಯಾದರ್ ವಂದಿಸಿದರು.

LEAVE A REPLY

Please enter your comment!
Please enter your name here