ಲಗೋರಿ ಫ್ರೆಂಡ್ಸ್ ಕ್ಲಬ್ ಅಮ್ಮುಂಜ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಲಗೋರಿ ಫ್ರೆಂಡ್ಸ್ ಕ್ಲಬ್ ಅಮ್ಮುಂಜ ಇದರ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಧ್ವಜಾರೋಹಣಗೈದು ಸ್ವಾತಂತ್ರೋತ್ಸವದ ಸಂದೇಶವನ್ನು ಸಾರಿದರು ಮತ್ತು ಎಸ್.ಡಿ.ಎಂ ಕಾಲೇಜು ಉಜಿರೆ ಇದರ ನಿವೃತ್ತ ಉಪನ್ಯಾಸಕರಾದ ಪುಂಡರೀಕ ಅಡ್ಪಂಗಾಯ,ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವಿಚಂದ್ರ ಆಚಾರ್ಯ ಕಂಬಳತಡ್ಡ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ನೇಮಾಕ್ಷ ಸುವರ್ಣ, ಲಗೋರಿ ಫ್ರೆಂಡ್ಸ್ ಕ್ಲಬ್ ಅಮ್ಮುಂಜ ಇದರ ಅಧ್ಯಕ್ಷರಾದ ಸುಕುಮಾರ ಗೌಡ ಉಪಸ್ಥಿತರಿದ್ದರು. 

ಈ ವರ್ಷ ಕ್ಲಬ್ ನ ವತಿಯಿಂದ ಕ್ಯಾಂಪ್ಕೋ ಫ್ಯಾಕ್ಟರಿಯಲ್ಲಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿದ ಕೊರಗಪ್ಪ ರೈ ಅಮ್ಮುಂಜ ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರಾದ ಪ್ರವೀಣ್, ಶಮಂತ್, ಹರೀಶ್, ರಿತೇಶ್, ವಿಖ್ಯಾತ್, ಹಿತೇಶ್, ಅಶ್ವಿತ್, ಕವಿತಾ, ರಕ್ಷಾ ಹಾಗೂ ಸ್ಥಳಿಯರಾದ ಗೋಪಾಲ ಗೌಡ ಕರೆಜ್ಜ,ರವೀಂದ್ರ ಶೆಟ್ಟಿ ಕಂಬಳತಡ್ಡ, ಗೀತಾ ಪುಂಡರೀಕ ,ವಿಶ್ವನಾಥ ರೈ, ಜಯಶಂಕರ್ ರೈ, ಅವಿನಾಶ್, ಬ್ರಿಜೇಶ್ ರೈ, ಉಮ್ಮರ್, ಹಸೈನಾರ್, ಆಲಿಕುಂಞ, ಕರೀಂ  ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here