ಪುತ್ತೂರು: ಉರ್ಲಾಂಡಿ ನಿವಾಸಿ ಅವಿವಾಹಿತೆಯೋರ್ವರು ಆ.15ರಂದು ಮಧ್ಯಾಹ್ನ ಮನೆಯಂಗಳದ ಬಾವಿಗೆ ಬಿದ್ದು ಮೃತಪ್ಟಟಿರುವ ಬಗ್ಗೆ ವರದಿಯಾಗಿದೆ.
ಉರ್ಲಾಂಡಿ ನಿವಾಸಿ ಶೇಖರ್ ಅವರ ಸಹೋದರಿ ಆರ್. ಗೀತಾ (59.ವ)ರವರು ಮೃತರು.
ಉರ್ಲಾಂಡಿ ನಿವಾಸಿ ಶೇಖರ್ ಅವರ ಸಹೋದರಿ ಆರ್. ಗೀತಾ (59.ವ)ರವರು ಮೃತರು.
ಗೀತಾ ಅವರು ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು, ಔಷಧಿ ಪಡೆಯುತ್ತಿದ್ದರು. ಸಹೋದರ ಶೇಖರ್ ಅವರ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಆ.15ರಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ್ದರು. ಬಳಿಕ ಅವರು ಮನೆಯಂಗಳದ ಬಾವಿಗೆ ಬಿದ್ದಿರುವ ಮಾಹಿತಿ ಬೆಳಕಿಗೆ ಬಂದಿದೆ. ಮೃತರು ಸಹೋದರರಾದ ಸೆಲೂನ್ನ ಮಾಲಕ ಶೇಖರ್, ಶಂಕರ್, ಸುರೇಶ್, ಸಹೋದರಿಯರಾದ ಆರ್. ವಿಜಯಾ, ಸರಸ್ವತಿರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.