ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಬಕ ಇಲ್ಲಿ ಶಾಲೆಯ ಸುತ್ತ ಮುತ್ತ ತುಂಬಿರುವ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ಬಲ್ನಾಡು ವಲಯ ಮೇಲ್ವಿಚಾರಕರು ಪ್ರಶಾಂತ್ ಕುಮಾರ್, ಶಾಲಾ ಮುಖ್ಯ ಗುರುಗಳಾದ ಬಾಬು ಟಿ, ಕಬಕ ಒಕ್ಕೂಟದ ಅಧ್ಯಕ್ಷರಾದ ಸೌಮ್ಯ, ಕಬಕ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ನಳಿನಿ, ಘಟಕ ಸಂಯೋಜಕಿ ಆಶಾಲತಾ ಉಪಸ್ಥಿತರಿದ್ದರು. ಪ್ರತಿನಿಧಿ ವಿನಯ ನಾಯ್ಕ, ಸದಸ್ಯರಾದ ದಿನೇಶ್, ಹರಿಪ್ರಸಾದ್, ಚಂದ್ರಶೇಖರ, ವಿನೋದ್, ಹರೀಶ್,ಶಂಭುಪೂಜಾರಿ, ಜಗದೀಶ್,ಲೋಕೇಶ್, ಸುಮಿತ್ರಾ, ಸುಗಂಧಿ, ವೀಣಾ, ಯಶೋದಾ ಸಹಕಾರ ನೀಡಿದರು. ಶಾಲಾ ಮುಖ್ಯ ಶಿಕ್ಷಕರು ಸೇವೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.