ರಾಷ್ಟ್ರ ಪ್ರಜ್ಞೆಯನ್ನು ಜಾತ್ಯಾತೀತತೆಯಲ್ಲಿ ಬೆಳೆಸಬೇಕು- ರಾಷ್ಟ್ರ ರಕ್ಷಾ ಸಂಗಮದಲ್ಲಿ ಎಸ್ ವೈ ಎಸ್ ಕರೆ

0

ಪುತ್ತೂರು: ಎಸ್ ವೈ ಎಸ್ ದ.ಕ.ವತಿಯಿಂದ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವು ಆ.15ರಂದು ಪುತ್ತೂರು ಮುಕ್ವೆ ರಹ್ಮಾನಿಯ ಮಸೀದಿ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಉಸ್ತಾದ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರು ಒಗ್ಗಟ್ಟಾಗಿ ನಿಂತು ಹೋರಾಡಿದ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಸಂದೇಶ ಭಾಷಣವನ್ನು ಮಾಡಿದ ದೇಶವನ್ನು ಆಳುವುದಕ್ಕೆ ಬಹುಮತ ಸಾಕು, ಆದರೆ ದೇಶ ಕಟ್ಟಲು ದೇಶದ ಎಲ್ಲಾ ಪ್ರಜೆಗಳ ಪಾಲುದಾರಿಕೆ ಮುಖ್ಯ ಎಂದರು. ಕ್ರೈಸ್ತ ಧರ್ಮ ಗುರು ಜೋನ್ ಮೊರಾಸ್ ಪರಸ್ಪರ ನೋವನ್ನು ಅಳಿಸಿ, ನಿರ್ಭಯವಾಗಿ ಜನ ಓಡಾಡುವ ದಿನ ಸ್ವಾತಂತ್ರ್ಯ ಪೂರ್ಣಗೊಳ್ಳುತ್ತದೆ ಎಂದರು.


ಹಿರಿಯ ವಿದ್ವಾಂಸರಾದ ಎಸ್ ಬಿ ದಾರಿಮಿ ಉಸ್ತಾದರು ಮಾತನಾಡಿ‌ ಇಂದು ರಾಜಕೀಯದವರಿಗೆ ಪಕ್ಷ ಕಟ್ಟಲು ಹಣ ಬೇಕಿಲ್ಲ, ಬೇಕಾದಷ್ಟು ಮಾಡಿಟ್ಟಿದ್ದಾರೆ. ಆದರೆ ಜನರ ಭಾವನೆಗಳನ್ನು ಕೆದಕಿದರೆ ಜನ ಬೆಂಬಲ ಪಡೆಯಬಹುದೆಂಬ ರೀತಿಯಲ್ಲಿ ವರ್ತಿಸುತ್ತಿರುವುದು ದೇಶದ ಒಗ್ಗಟ್ಟಿಗೆ ಮಾರಕ ಎಂದರು.

ಸ್ವಾತಂತ್ರ್ಯವನ್ನು ಮನೆ ಮನೆಗಳಲ್ಲಿ ಬಣ್ಣ ಬಳಿದು, ತೋರಣ ಕಟ್ಟಿ ಧ್ವಜ ಹಿಡಿದು ಸಂಭ್ರಮಿಸುತ್ತಿರುವುದು ರಾಷ್ಟ್ರಭಕ್ತಿಯ ಸಂಕೇತ ಎಂದ ರಾಜ್ಯ ಎಸ್ ಕೆ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮುಖ್ಯ ಭಾಷಣ ಮಾಡಿದರು. ಸ್ಥಳೀಯ ಖತೀಬರಾದ ಇರ್ಷಾದ್ ದಾರಿಮಿ, ಕರೀಮ್ ದಾರಿಮಿ, ರಶೀದ್ ಫೈಝಿ, ಹಕೀಮ್ ಪರ್ತಿಪಾಡಿ, ಎಲ್ ಟಿ ಹಾಜಿ ಶುಭಾಶಯ ಭಾಷಣ ಮಾಡಿದರು. ಕಾರ್ಯಕ್ರಮದ ಭಾಗವಾಗಿ ಝಿಯಾರತ್ ದುಅ ಸಯ್ಯಿದ್ ಅಮೀರ್ ತಂಙಳ್ ನಿರ್ವಹಿಸಿದರು.

ಕಾರ್ಯಕ್ರಮದ ಚೇರ್ಮನ್ ಅಬೂಬಕ್ಕರ್ ಮುಲಾರ್ ಸಭೆಯನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಇರ್ಶಾದ್ ದಾರಿಮಿ ಮಿತ್ತಬೈಲು, ಕಾಸಿಮ್ ದಾರಿಮಿ, ಶಾಫೀ ದಾರಿಮಿ ಸುಳ್ಯ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಮಹಮ್ಮದ್ ಮೌಲವಿ ಮುಂಡೋಲೆ, ಮುಕ್ವೆ ಜಮಾತ್ ಅಧ್ಯಕ್ಷರಾದ ಇಬ್ರಾಹಿಂ ಮುಲಾರ್, ಕೆ ಎಲ್ ಉಮರ್ ದಾರಿಮಿ ಪಟ್ಟೋರಿ, ಶಂಶುದ್ದೀನ್ ದಾರಿಮಿ ಮುಂಡೋಲೆ, ತಾಜುದ್ದೀನ್ ರಹ್ಮಾನಿ, ರಶೀದ್ ರಹ್ಮಾನಿ ಪರ್ಲಡ್ಕ, ಜಿಲ್ಲಾ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಮಹಮ್ಮದ್ ರಫೀಕ್ ಕೊಡಾಜೆ, ಅಬ್ದುಲ್ ರಶೀದ್ ಪರ್ಲಡ್ಕ, ಕೆ ಎಮ್ ಎ ಹನೀಫೀ ಕೊಡುಂಗಾಯಿ, ಮುಸ್ತಫಾ ಫೈಝಿ ಕಿನ್ಯಾ ಸ್ವಾಗತ್ ಅಬೂಬಕರ್ ಹಾಜಿ, ರಿಯಾಝ್ ರಹ್ಮಾನಿ, ಅನ್ವರ್ ಮುಸ್ಲಿಯರ್,ಶರೀಫ್ ಮಿತ್ತಬೈಲು, ಹಮೀದ್ ಹಾಜಿ ಜಾಲ್ಸೂರು, ಮುಕ್ವೆ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ರಫೀಕ್ ಮಣಿಯ ಕಾರ್ಯದರ್ಶಿ ಝುಬೇರ್ ನೆರಿಗೆರಿ, ಮುಕ್ವೆ ಜಮಾತ್ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮೇರಿಗೇರಿ, ಕೋಶಾಧಿಕಾರಿ ಉಮರ್ ಹಾಜಿ ಪಟ್ಟೆ, ಅಲ್ಲದೆ ಸಮಸ್ತದ ಪೋಷಕ ಸಂಘಟನೆಗಳ ಉಲೆಮಾ ಉಮರ ನಾಯಕರು, ಊರ ಮಹನೀಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here