ಪುತ್ತೂರು: ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ ಬಿ ಸುಂದರ ನೆರವೇರಿಸಿದರು.
ಬಳಿಕ ವಿದ್ಯಾರ್ಥಿಗಳ ಜೊತೆ ಮೆರವಣಿಗೆ ನಡೆದು,ನಂತರ ಸಭಾ ಕಾರ್ಯಕ್ರಮ ನಡೆಯಿತು.
ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಸೈಯ್ಯದ್ ಗಫೂರ್ ಸಾಹೇಬ್ ಪಾಲ್ತಾಡು ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಶುಭಲತಾ ಜೆ ರೈ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಶ್ರೀದೇವಿ ಕ್ರಿಕೆಟರ್ಸ್ ಪಾಲ್ತಾಡು ಅಧ್ಯಕ್ಷ ಶರತ್, ಶ್ರೀ ಅಮ್ಮನವರ ಸೇವಾ ಸಮಿತಿ ಪಾಲ್ತಾಡು ಅಧ್ಯಕ್ಷ ಮಧುಸೂಧನ ,ನ್ಯೂ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಾಲ್ತಾಡು ಅಧ್ಯಕ್ಷ ಹನೀಫ್ ಕುಂಡಡ್ಕ,ಎಲ್ಲಾ ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಗೀತಾ ಬಿ ವಿ ಇವರು ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ ಅವರು ನಿರೂಪಿಸಿದರು. ಶಿಕ್ಷಕಿ ವಸಂತಿ ಕೆ ವಂದಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಹಿರಿಯ ವಿದ್ಯಾರ್ಥಿಗಳು ಊರ ಪರಪೂರ ವಿದ್ಯಾಭಿಮಾನಿಗಳು ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ ,ಜಿ6 ನ್ಯೂಸ್ ನ ಹರೀಶ್ ಕುಮಾರ್ ಹಾಗೂ ಅಶ್ವಿನ್ ಉಪಸ್ಥಿತರಿದ್ದರು. ಸಿಹಿ ತಿಂಡಿಗಳು ಹಾಗೂ ಉಪಹಾರವನ್ನು ನೀಡಲಾಯಿತು.