ಕೊಯಿಲ ಬಡಗನ್ನೂರು  ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ 

0

ಬಡಗನ್ನೂರು : ಕೊಯಿಲ ಬಡಗನ್ನೂರು ಇಲ್ಲಿನ ಸ.ಹಿ.ಪ್ರಾ.ಶಾಲೆಯಲ್ಲಿ  79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು  ಸಡಗರ  ಸಂಭ್ರಮದಿಂದ ಆಚರಿಸಲಾಯಿತು. 

ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ಗೌಡ ಕೊಯಿಲ ರವರು  ಧ್ವಜಾರೋಹಣ ನೆರವೇರಿಸಿ ಶುಭ ಹಾರೖೆಸಿದರು.ಮುಖ್ಯಅತಿಥಿಗಳಾಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ರೇಖಾ ನಾಗರಾಜ್ ಮಾತನಾಡಿ  ವಿದ್ಯಾರ್ಥಿಗಳು ಹಾಗೂ ಶಾಲೆಯ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿ 79 ನೇ ಸ್ವಾತಂತ್ರ್ಯೋತ್ಸವ ಶುಭಾಶಯ ಸಲ್ಲಿಸಿದರು. ವಿಶ್ರಾಂತ ಶಿಕ್ಷಕರಾದ ಉದಯ ಕುಮಾರ್ ಶರವು ಮಕ್ಕಳಿಗೆ ಸ್ವಾತಂತ್ರ್ಯ ಉತ್ಸವದ ಮಹತ್ವ ಹಾಗೂ ಹೋರಾಡಿದ ಮಹನೀಯರ ತ್ಯಾಗ ಬಲಿದಾನಗಳನ್ನು ತಿಳಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಶೀಲ ಪಕ್ಯೊಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ರೈ ಕೊಯಿಲ ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ಗೌಡ ಕೊಯಿಲ ,ಉಪಾಧ್ಯಕ್ಷರಾದ ಸತೀಶ್ ಒ, ಅಂಗನವಾಡಿ ಕಾರ್ಯಕರ್ತೆ ಹೇಮಾವತಿ  ಪೇರಾಲು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ದೇಶಭಕ್ತಿ ಗೀತ ಗಾಯನ ,ಭಾಷಣ,ಚಿತ್ರಕಲಾ ಸ್ಪರ್ಧೆಯ ಅಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬಳಿಕ ದೇಶಭಕ್ತಿ ಗೀತ ಗಾಯನ, ನೃತ್ಯಗಳ ವೈಭವದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಸ್ವಸಹಾಯ ಸಂಘ ಗಳ ಪದಾಧಿಕಾರಿಗಳು, ಸದಸ್ಯರು ಮಕ್ಕಳ  ಪೋಷಕರು ,ಎಸ್ ಡಿ ಎಂ ಸಿ, ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣಾಭಿಮಾನಿಗಳು  ಭಾಗವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ ಬಿ ,ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕರಾದ ಗಿರೀಶ್ ವಂದಿಸಿದರು. ಪಧವೀಧರ ಶಿಕ್ಷಕಿ ಸೌಮ್ಯ ಬಿ ನಿರೂಪಿಸಿದರು.ಅತಿಥಿ ಶಿಕ್ಷಕಿ ಸರಳ ಡಿ ,ಗೌರವ ಶಿಕ್ಷಕಿ ಪೂರ್ಣಿಮಾ ಸಹಕರಿಸಿದರು.

LEAVE A REPLY

Please enter your comment!
Please enter your name here