ಬಡಗನ್ನೂರುಃ ಬಡಗನ್ನೂರು ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಗಿರೀಶ್ ಗೌಡ ಕನ್ನಯ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಶುಭ ಹಾರೖೆಸಿದರು.
ಮುಖ್ಯ ಅತಿಥಿಗಳಾಗಿ ಜಯಂತ್ ರೈ ಕುದ್ಕಾಡಿ, ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ನಾರಾಯಣ ರೈ ಕುದ್ಕಾಡಿ, ಅಧ್ಯಕ್ಷರಾದ ಸುರೇಶ್ ರೈ , ನಿವೃತ್ತ ಗುರುಗಳಾದ ಹರಿಣಾಕ್ಷಿ ಎ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಾಲಿಂಗ ಪಾಟಾಳಿ, ಬಾಬು ಮೂಲ್ಯ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಸದಸ್ಯರುಗಳು, ಕೋಟಿ ಚೆನ್ನಯ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಪೋಷಕವೃಂದದವರು, ಹಿರಿಯ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಅವರಣದಿಂದ ವಾದ್ಯ ಘೋಷಗಳೊಂದಿಗೆ ಹೊರಟ ಸ್ವಾತಂತ್ರ್ಯದ ಜಾಥಾ ಮುಖ್ಯರಸ್ತೆಯ ಮೂಲಕ ಗ್ರಾಮ ಪಂಚಾಯತಿನವರೆ ಸಾಗಿ ಮರಳಿ ಬಂದು ಬಳಿಕ ಮಕ್ಕಳಿಂದ ಭಾಷಣ ಹಾಗೂ ಗೀತಗಾಯನ ಕಾರ್ಯಕ್ರಮ ನಡೆಯಿತು.