ಪುತ್ತೂರು: ನೇಲ್ಯಡ್ಕ ಅಂಗನವಾಡಿ ಕೇಂದ್ರದಲ್ಲಿ ನೂತನ ಧ್ವಜಸ್ಥಂಬ ಉದ್ಘಾಟನೆ ಹಾಗೂ ಧ್ವಜಾರೋಹಣ ನಡೆಯಿತು.
ಆರ್ಯಾಪು ಗ್ರಾ.ಪಂ.ಸದಸ್ಯರೂ, ದೊಡ್ಡಡ್ಕ ಶ್ರೀ ಷಣ್ಮುಖ ಜ್ಯೋತಿಷ್ಯಾಲಯದ ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯ ಧ್ವಜಾರೋಹಣ ನೆರವೇರಿಸಿದರು. ಅಂಗನವಾಡಿ ಪುಟಾಣಿಗಳು ನೂತನ ಧ್ವಜಸ್ಥಂಬ ವನ್ನು ಉದ್ಘಾಟಿಸಿದರು.
ವಾಣೀ ಸುಬ್ರಹ್ಮಣ್ಯ ಬಲ್ಯಾಯ ಸ್ವಾಗತಿಸಿದರು. ಪುಷ್ಪಾ ಚಂದ್ರಶೇಖರ ನಾಯ್ಕ್ ಕಾರ್ಯಕ್ರಮ ನಿರೂಪಿದರು. ಆಶಾಕಾರ್ಯಕರ್ತೆ ಶಾಂತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಗನವಾಡಿ ಕಾರ್ಯಕರ್ತೆ ಆಶಾ ವಂದಿಸಿದರು.
.