ಇಂದಿನ ಕಾರ್ಯಕ್ರಮ (18-08-2025)

0

ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆ
ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಶಿವಳ್ಳಿ ಸಂಪದ ಬೊಳುವಾರು ವತಿಯಿಂದ ಸಂಜೆ ೪.೩೦ರಿಂದ ಶ್ರೀಮದ್ಭಾಗವತ ಸಪ್ತಾಹ
ಕುಟ್ರುಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
34 ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ೩೪ ನೆಕ್ಕಿಲಾಡಿ ಗ್ರಾ.ಪಂ ಗ್ರಾಮಸಭೆ
ಶುಭವಿವಾಹ
ಪುತ್ತೂರು ತೆಂಕಿಲ ಬೈಪಾಸ್ ರಸ್ತೆ ಸ್ವಾಮಿ ಕಲಾಮಂದಿರದಲ್ಲಿ ಪುತ್ತೂರು ತಾಲೂಕು ಕಸಬಾ ಗ್ರಾಮದ ಬೀದಿಮಜಲು ಶೇಷವೇಣಿ ಮತ್ತು ಕೆದಂಬಾಡಿ ಶಿವಪ್ಪ ಗೌಡರ ಪುತ್ರಿ ಹರ್ಷಿತಾ ಕೆ. ಎಸ್. ಮತ್ತು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಮಿತ್ತಂಡೇಲು ಲೀಲಾವತಿ ಮತ್ತು ದಿ| ಸಾಂತಪ್ಪ ಗೌಡರ ಪುತ್ರ ಯೋಗೀಶ ಎಂ. ರವರ ವಿವಾಹ
ಟಿಕಡಬ ತಾಲೂಕು ಕೇನ್ಯ ಕಣ್ಕಲ್ ವರನ ಮನೆಯಲ್ಲಿ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಕೊಂಬಕೆರೆ ಸುಶೀಲ ಮತ್ತು ವೆಂಕಪ್ಪ ನಾಯ್ಕರವರ ಪುತ್ರಿ ಕಾವ್ಯ ಮತ್ತು ಕಡಬ ತಾಲೂಕು ಕೇನ್ಯ ಕಣ್ಕಲ್ ದಿ| ಶಿವಪ್ಪ ನಾಯ್ಕ ಮತ್ತು ರೋಹಿಣಿಯವರ ಪುತ್ರ ದಿನೇಶ್‌ರವರ ವಿವಾಹ
ಶುಭಾರಂಭ
ಪುತ್ತೂರು ಫೆಡರಲ್ ಬ್ಯಾಂಕ್‌ನ ಎದುರುಗಡೆ ಬೆಳಿಗ್ಗೆ ೧೦ಕ್ಕೆ ಹೊಟೇಲ್ ಶ್ರೀ ಭಗವತಿ ನವೀಕೃತಗೊಂಡು ಶುಭಾರಂಭ
ಕಬಕ ಪಂಚಾಯತ್ ಕಚೇರಿ ಬಳಿಯಿರುವ ರೋಟರಿ ಮುಳಿಯ ಕಟ್ಟಡದಲ್ಲಿ ಬೆಳಿಗ್ಗೆ ದಕ್ಷಿಣ ಕನ್ನಡ, ಉತ್ತರ ಕರ್ನಾಟಕದ ಊಟ, ತಿಂಡಿ ತಿನಿಸುಗಳ ಮನೆ “ಹೋಟೆಲ್ ನಮ್ಮ ಮನೆ” ಶುಭಾರಂಭ
ಉತ್ತರಕ್ರಿಯೆ
ತಾರಿಪಡ್ಪು ಶ್ರೀ ದುರ್ಗಾ ನಿಲಯದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಈಶ್ವರ ನಾಯ್ಕ ತಾರಿಪಡ್ಪುರವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here