
ಪುತ್ತೂರು: ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಮೊಟ್ಟೆತ್ತಡ್ಕ ಜಂಕ್ಷನ್ ನಲ್ಲಿ ಆ.15 ರಂದು ಸ್ವಾತಂತ್ರೋವವನ್ನು ಆಚರಿಸಲಾಯಿತು.
ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷ ಮಹಮ್ಮದ್(ಪುತ್ತು) ರವರು ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಶೈಲಾ ಪೈ, ಪ್ರಮುಖರಾದ ಅಬ್ಸುಲ್ಲ ಕೆ, ವಿಶ್ವನಾಥ ಟೈಲರ್, ರಫೀಕ್ ಎಂ.ಕೆ, ಉಮೇಶ್ ಡಿ.ಕೆ, ಸುರೇಶ್ ಪೂಜಾರಿ,ಸುರೇಂದ್ರ ಎ, ಮೊಟ್ಟೆತ್ತಡ್ಕ ಆಟೋ ಚಾಲಕ ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ಚಿದಾನಂದ ಜೊತೆಗೆ ಸ್ಥಳೀಯ ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು.