- ಪುತ್ತೂರು: 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ, ಕೆನರಾ ಬ್ಯಾಂಕ್ ತನ್ನ ಪ್ರಮುಖ ಸಿಎಸ್ಆರ್ (CSR) ಯೋಜನೆಯಾದ ಡಾ. ಅಂಬೇಡ್ಕರ್ ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿವೇತನ ಯೋಜನೆಯಡಿ, ಭಾರತದಾದ್ಯಂತ 7,660 ಕ್ಕೂ ಹೆಚ್ಚು ಪ್ರತಿಭಾವಂತ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ವಿತರಿಸಿದೆ.
ಆರ್ಯಾಪು ಗ್ರಾಮ ಪಂಚಾಯತ್‌ನಲ್ಲಿ ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಚೇರಿಯು ಡಾ. ಅಂಬೇಡ್ಕರ್ ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಪುತ್ತೂರು ಪ್ರಾದೇಶಿಕ ಕಚೇರಿ ಎ.ಜಿ.ಎಂ ಮುಖ್ಯಸ್ಥ ರಂಜನ್ ಕುಮಾರ್ ಮತ್ತು ಪುತ್ತೂರು ಪ್ರಾದೇಶಿಕ ಕಚೇರಿಯ ಪಿ ಆರ್ ಡಿ.ಎಂ ಅಜಿತ್‌ಕುಮಾರ್ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಒಳಪಟ್ಟ ಎಲ್ಲಾ ಶಾಖೆಗಳ ವ್ಯಾಪ್ತಿಯಲ್ಲಿ ಇರುವ ಶಾಲೆಗಳಲ್ಲಿ ಓದುತ್ತಿರುವ 326 ಮಂದಿ ಪ್ರತಿಭಾವಂತ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪುತ್ತೂರು ಪ್ರಾದೇಶಿಕ ಕಚೇರಿ ಎ.ಜಿ.ಎಂ ಮುಖ್ಯಸ್ಥ ರಂಜನ್ ಕುಮಾರ್ ಮಾತನಾಡಿ, ಕೆನರಾ ಬ್ಯಾಂಕ್ ತನ್ನ ಸ್ಥಾಪನೆಯ ಮೊದಲ ಎರಡು ಆದರ್ಶಗಳಾದ ಅಂಧಶ್ರದ್ಧೆ ಹಾಗೂ ಅಜ್ಞಾನವನ್ನು ದೂರಿಸುವುದು ಮತ್ತು ಶಿಕ್ಷಣವನ್ನು ಹಬ್ಬಿಸುವುದು ಇದಕ್ಕೆ ಬದ್ಧವಾಗಿಯೇ ನಿಂತಿದೆ ಎಂದರು. ಜೊತೆಗೆ, 2013–14 ರಿಂದ ಪ್ರಾರಂಭವಾದ “ವಿದ್ಯಾ ಜ್ಯೋತಿ” ವಿದ್ಯಾರ್ಥಿವೇತನ ಯೋಜನೆಯ ಮೂಲಕ ಬ್ಯಾಂಕ್ ನಿರಂತರವಾಗಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಪಿಡಿಓ ನಾಗೇಶ್ ಎಂ, ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಎಚ್ ಹಾಗೂ ಇತರ ಅತಿಥಿಗಳು ಉಪಸ್ಥಿತರಿದ್ದರು.