ಪುತ್ತೂರು: ದಾರುಲ್ ಹಸನಿಯಾ ಅಕಾಡೆಮಿ ಸಾಲ್ಮರ ಇದರ ನೂತನ ಕಟ್ಟಡದ ಎರಡನೆಯ ಅಂತಸ್ತಿನ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಲಾಯಿತು. ಆ ಪ್ರಯುಕ್ತ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ಮತ್ತು ಸಯ್ಯಿದ್ ಯಹ್ಯಾ ತಂಙಳ್ ಪೋಳ್ಯ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಪುತ್ತೂರು ತಾಲೂಕು ಜಂಇಯ್ಯತ್ತುಲ್ ಉಲಮಾ ಕೋಶಾಧಿಕಾರಿ ನಂಜೆ ಉಮರ್ ಮುಸ್ಲಿಯಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ದಾರುಲ್ ಹಸನಿಯಾ ಜುಬೈಲ್ ಘಟಕದ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ಜುಬೈಲ್ ಘಟಕದ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ದಮಾಮ್ ಘಟಕದ ಗೌರವಾಧ್ಯಕ್ಷ ಹಾಜಿ ಅಮ್ಜದ್ ಖಾನ್ ಪೋಳ್ಯ, ಅಧ್ಯಕ್ಷ ನೌಶಾದ್ ಹಾಜಿ ಪೋಳ್ಯ, ಉದ್ಯಮಿಗಳಾದ ನಾಸಿರ್ ದಮಾಮ್, ಇಕ್ಬಾಲ್ ಇಂಜಿನಿಯರ್ ಬೆಂಗಳೂರು, ಮುಹಮ್ಮದ್ ಹಾಜಿ ಮುಕ್ವೆ, ಯು.ಎ.ಇ.ನ್ಯಾಷನಲ್ ಸಮಿತಿಯ ಅಧ್ಯಕ್ಷ ಆರಿಫ್ ಕೂರ್ನಡ್ಕ, ಕೋಶಾಧಿಕಾರಿ ಬಶೀರ್ ಕೂರ್ನಡ್ಕ, ದುಬೈ ಘಟಕದ ಅಧ್ಯಕ್ಷ ಶರೀಫ್ ಬೈತಡ್ಕ, ಅಬುದಾಬಿ ಘಟಕದ ಅಧ್ಯಕ್ಷ ಶಾಕಿರ್ ಕೂರ್ನಡ್ಕ, ಕೋಶಾಧಿಕಾರಿ ಸಿರಾಜ್ ಕೂರ್ನಡ್ಕ, ಉದ್ಯಮಿಗಳಾದ ತಸ್ರೀಫ್ ಆರ್ತಿಕೆರೆ, ಅಸ್ವಾಲಿಹಾ ಕಾಲೇಜ್‌ನ ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ, ರೇಂಜ್ ಕೋಶಾಧಿಕಾರಿ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ ಮತ್ತು ಫಝಲ್ ಆತೂರು ಶುಭ ಹಾರೈಸಿದರು.
ದಾರುಲ್ ಹಸನಿಯಾ ಟ್ರಸ್ಟಿಗಳಾದ ಶರೀಫ್ ಹಾಜಿ ನೇರಳಕಟ್ಟೆ, ಮಾಹಿನ್ ಹಾಜಿ ಬಾಳಾಯ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ಬಶೀರ್ ಹಾಜಿ ದರ್ಬೆ, ಮ್ಯಾನೇಜರ್ ಅಬ್ದುಲ್ ಕರೀಂ ದಾರಿಮಿ, ಪುತ್ತೂರು ನಗರ ಸಭಾ ರಿಯಾಝ್ ಪರ್ಲಡ್ಕ, ಉದ್ಯಮಿಗಳಾದ ಉಮರ್ ಹಾಜಿ ಮುಕ್ವೆ, ಶ್ರಫ್ ಪರ್ತಿಪ್ಪಾಡಿ,g ಫೀಕ್ ಪರ್ಲಡ್ಕ, ಉಮರ್ ಪರ್ಲಡ್ಕ, ಡಿ.ಕೆ ಅಬ್ದುಲ್ ಹಮೀದ್ ಕೆಮ್ಮಾಯಿ, ಅಬ್ದುಲ್ ಲತೀಫ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕ ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಸ್ವಾಗತಿಸಿ, ವಂದಿಸಿದರು.