ಹಿರೇಬಂಡಾಡಿ: ಮೊಸರು ಕುಡಿಕೆ ಉತ್ಸವ ಸಮಿತಿ ಹಿರೇಬಂಡಾಡಿ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 37ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ.17ರಂದು ಹಿರೇಬಂಡಾಡಿ ಮುರದಮೇಲು ಶಿವನಗರ ಮಂಜುಶ್ರೀ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಬೆಳಗ್ಗಿನಿಂದ ಸಂಜೆ ತನಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಣ್ಣ ಮಕ್ಕಳಿಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸಂಘದ ಕಾರ್ಯದರ್ಶಿ ನವೀನ್ ಕುಬಲ, ಖಜಾಂಜಿ ಲೋಕೇಶ್ ಹೆನ್ನಾಳ, ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಬಾರ್ಲ ಆಟೋಟ ಸ್ಪರ್ಧೆ ನಡೆಸಲು ಸಹಕರಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು, ನಟ್ಟಿಬೈಲು ಮಾಧವ ಶಿಶು ಮಂದಿರದ ಕಾರ್ಯದರ್ಶಿ ಉದಯಕುಮಾರ್ ಯು.ಎಲ್. ಶುಭಹಾರೈಸಿದರು. ಶಿವನಗರ ಮಂಜುಶ್ರೀ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ನಾಯ್ಕ್ ಉಪಸ್ಥಿತರಿದ್ದರು. ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ರೈ ಶಿವನಗರ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ ಕೇಪುಳು ಸ್ವಾಗತಿಸಿದರು. ಸುಧಾಕರ ಕಜೆ, ರೇವತಿ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.