ಆಲಂಕಾರು: ಕೊಯಿಲ ಗೋಕುಲನಗರದಲ್ಲಿ 43ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ನಡೆಯಿತು.
ಆತೂರು ಸದಾಶಿವ, ಮಹಾಗಣಪತಿ ದೇವಸ್ಥಾನದ ಪ್ರದಾನ ಆರ್ಚಕರಾದ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ರವರು ಅಷ್ಟಮಿ ಕಟ್ಟೆಯಲ್ಲಿ ದೀಪೋಜ್ವಲನೆ ಮಾಡಿದ ನಂತರ ಬಾಲಕ, ಬಾಲಕಿಯರಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಭಕ್ತಿಗೀತೆ, ಸಂಗೀತ ಕುರ್ಚಿ, ಬಕೆಟ್ ಬಾಲ್, ಚೆಂಡೆಸೆತ, ಒಂಟಿಕಾಲಿನ ಓಟ, ಮಡಿಕೆ ಒಡೆಯವುದು, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದು ಮಧ್ಯಾಹ್ನ ಭೋಜನ ವ್ಯವಸ್ಥೆ ನಡೆದು ಕಬಡಿ ಪಂದ್ಯಾಟ, ಶ್ರೀ ಕೃಷ್ಣ ಸ್ಪರ್ಧೆ ನಡೆದು ಸಮಾರೋಪ ಸಮಾರಂಭ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಅಧ್ಯಕ್ಷರಾದ ಮೋಹನದಾಸ ಶೆಟ್ಟಿ ವಹಿಸಿದ್ದರು. ಧಾರ್ಮಿಕ ಪ್ರವಚನ ಕೊಯಿಲ ಜಾನುವಾರು ಸಂದರ್ಶನ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾದ ಡಾ| ಪ್ರಸನ್ನ ಕುಮಾರ್ ರವರು ಧಾರ್ಮಿಕ ಪ್ರವಚನ ನೀಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಮಹತ್ವ ತಿಳಿಸಿದರು.
ಇದೇ ಸಂಧರ್ಭದಲ್ಲಿ ರಾಮಕುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ನಿವೃತ್ತ ನಿರ್ವಹಣಾಧಿಕಾರಿ ಚಿತ್ತರಂಜನ್ ರಾವ್ ಬದೆಂಜ, ಕೊಯಿಲ ಗ್ರಾ.ಪಂ ಪೌರ ಕಾರ್ಮಿಕರಾದ ವಸಂತಿ ಕಲ್ಕಾಡಿ, ಸರೋಜಿನಿ ಕೊರಂತಾಜೆ, ರಾಮಕುಂಜ ಗ್ರಾ.ಪಂ ನ ಸುಮತಿ ಕಲ್ಲೇರಿ, ಯಶೋಧ ಶಾರದನಗರ ರವರನ್ನು ಸಭೆಯಲ್ಲಿ ಸನ್ಮಾನ ಮತ್ತು ಬಹುಮಾನ ಕಾರ್ಯಕ್ರಮ ನಡೆಯಿತು. ಅಭಿನವ್ ಆನೆಗುಂಡಿ ಸ್ವಾಗತಿಸಿ, ಗಣೇಶ ಕೆದಗೆದಡಿ, ಸುಧೀಶ್ ಪಟ್ಟೆ ಕಾರ್ಯಕ್ರಮ ನಿರೂಪಿಸಿ,ಪ್ರಕಾಶ್ ಕೆ.ಆರ್ ಧನ್ಯವಾದ ಸಮರ್ಪಿಸಿದರು. ನಂತರ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡ ಕೆಮ್ಮಾರ, ಶ್ರೀ ದೇವಿ ಭಜನ ತಂಡ ವರ್ನಡ್ಕ, ಶ್ರೀ ಶಾರದಾಂಬ ಭಜನಾ ಮಂಡಳಿ ಶಾರದನಗರ, ಶ್ರೀ ರಾಧಾಕೃಷ್ಣ ಮಹಿಳಾ ಭಜನಾ ಮಂಡಳಿ ಗೋಕುಲನಗರ ಭಜನಾ ಕಾರ್ಯಕ್ರಮ ನೇರವೆರಿಸಿ ಅಷ್ಟಮಿ ಕಟ್ಟೆಯಲ್ಲಿ ಮಂಗಳೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷರಾದ ಉದಯಕಶ್ಯಪ್ ಪೂರಿಂಗ, ಪ್ರದಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಲ್ಲಡ್ಕ, ಸಮಿತಿಯ ಪದಾಧಿಕಾರಿಗಳಾದ ಪುರಷೋತ್ತಮ ಗೋಕುಲನಗರ, ಅಶೋಕ್ ಕೊಯಿಲ, ಯಧುಶ್ರೀ ಆನೆಗುಂಡಿ, ಮನಮೋಹನ ಪುಣಿಕೆತ್ತಡಿ, ಶ್ರೀಶ ಕುಮಾರ್ ಕೆಮ್ಮಾರ, ಯೋಗೀಶ್ ಕುಲಾಲ್, ಸುದರ್ಶನ್, ಬಾಬು ಕುಲಾಲ್ ಪಾದೆ, ಕೆ.ಟಿ ಪೂಜಾರಿ ಕೆರ್ನಡ್ಕ, ಬಾಲಕೃಷ್ಣ ಭಟ್, ಶಿವರಾಮ ಭಟ್, ವಾಮನ ಬರೆಮೇಲು, ದೀಕ್ಷಿತ್ ಪೂರಿಂಗ, ರೂಪೇಶ್ ಪುತ್ಯೆ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಸಹಕರಿಸಿದರು.