ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ನೆಂಪು ಕಾರ್ಯಕ್ರಮ

0

ಪುತ್ತೂರು: ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಆಟಿದ ನೆಂಪು ಕಾರ್ಯಕ್ರಮವನ್ನು ಆ.15 ರಂದು ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಹೇಮಲತಾ ಕುಮಾರಮಂಗಲ ಧ್ವಜಾರೋಹಣವನ್ನು ನೇರವೇರಿಸಿ. ಅಧ್ಯಕ್ಷತೆ ವಹಿಸಿದ್ದರು.

ಆಟಿದ ನೆಂಪು ಕಾರ್ಯಕ್ರಮವನ್ನು ನ್ಯಾಯವಾದಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್‌ ಕೆ ಸವಣೂರು ಉದ್ಘಾಟಿಸಿ, ಮಾತನಾಡಿ, ಆಟಿ ತಿಂಗಳು ಕಷ್ಟದ ಜೀವನವನ್ನು ನೆನಪಿಸುತ್ತದೆ. ಆಟಿ ತಿಂಗಳಿನ ವಿವಿಧ ಬಗೆಯ ತಿಂಡಿ, ತಿನಸುಗಳು, ಸಾಂಪ್ರದಾಯಗಳನ್ನು ತಿಳಿಸುವ ಪ್ರಯತ್ನವನ್ನು ಶಾಲೆಯ ಶಾಲಾಭಿವೃದ್ಧಿ ಸಮಿತಿಯು ಪ್ರಯತ್ನವನ್ನು ಮಾಡಿರುವುದು ಸಂತಸದ ವಿಚಾರವಾಗಿದೆ ಎಂದರು.

ಹಿರಿಯ ಜನಪದ ಕಲಾವಿದ ಡೊಂಬಯ್ಯ ಕಾಪೆಜಾಲು ಅವರನ್ನು‌ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾಮ ಪಂಚಾಯತ್‌ ಸದಸ್ಯರಾದ ಗಿರಿಶಂಕರ ಸುಲಾಯ, ಶೀನಪ್ಪ ಶೆಟ್ಟಿ ನೆಕ್ರಾಜೆ, ಯಶೋಧ ನೂಜಾಜೆ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಉಮೇಶ್‌ ಬೇರಿಕೆ, ಕೋಶಾಧಿಕಾರಿ ಪುಟ್ಟಣ್ಣ ಪರಣೆ, ಸವಣೂರು ಪ್ರೌಢ ಶಾಲೆಯ ಸಹಶಿಕ್ಷಕ ಕಿಶನ್‌ ಬಿ ವಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸಂತೋಷ್‌ ಎನ್‌ ಟಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಅತಿಥಿ ಶಿಕ್ಷಕರಾದ ಶ್ಯಾಮ್‌ ಕೆ ಕಾರ್ಯಕ್ರಮ ನಿರೂಪಿಸಿ, ರಾಜೇಶ್ವರಿ ಕೆ ವಂದಿಸಿದರು.

LEAVE A REPLY

Please enter your comment!
Please enter your name here