ಆ.27 : ಮುಕ್ಕೂರಿನಲ್ಲಿ 16 ನೇ ವರ್ಷದ ಗಣೇಶೋತ್ಸವ ಆಚರಣೆ

0

ಪುತ್ತೂರು: ಕುಂಡಡ್ಕ -ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ16 ನೇ ವರ್ಷದ  ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸಮ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ‌ಹಾಗೂ ನೇಸರ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಆ.27 ರಂದು ಮುಕ್ಕೂರು ವಠಾರದಲ್ಲಿ ನಡೆಯಲಿದೆ.

ಬೆಳಗ್ಗೆ ಸುಧೀರ್ ಕೊಂಡೆಪ್ಪಾಡಿ ದೀಪ ಬೆಳಗಿಸಲಿದ್ದು ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಅನವುಗುಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಗ್ರಾ.ಪಂ.ಸದಸ್ಯರಾದ ಗುಲಾಬಿ ಬೊಮ್ಮೆಮ್ಮಾರು, ಚಂದ್ರಾವತಿ ಇಟ್ರಾಡಿ, ಯಶವಂತ‌ ಜಾಲು, ಜಯಂತ ಕುಂಡಡ್ಕ, ಪ್ರಸಾದ್ ನಾಯ್ಕ ಕುಂಡಡ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಅದಾದ ಬಳಿಕ ಆಯ್ದ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ.

ಪ್ರಶಸ್ತಿ ಪ್ರಧಾನ, ಸಮ್ಮಾನ,ಪ್ರತಿಭಾ ಪುರಸ್ಕಾರ
ಬೆಳಗ್ಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ವಹಿಸಲಿದ್ದು, ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸಮಾಜ‌ ಸೇವಾ ವಿಭಾಗದಲ್ಲಿ ರಕ್ಷಿತ್ ಕುಮಾರ್ ಪೆರುವಾಜೆ ಅವರಿಗೆ ನೇಸರ ವಾರ್ಷಿಕ ಪ್ರಶಸ್ತಿ-2025 ಪ್ರಧಾನ ಮಾಡಲಿದ್ದಾರೆ. ನಿವೃತ್ತ ಶಿಕ್ಷಕಿ ಲಲಿತಾ ಕುಮಾರಿ ಮನವಳಿಕೆ, ಬೆಳ್ಳಾರೆ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘದ ಮಾಜಿ ಸಿಇಓ ವಿಜಯ ರೈ ನೆಲ್ಯಾಜೆ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಸಮ್ಮಾನಿಸಲಿದ್ದಾರೆ. ಸಮ್ಮಾನಿತರ ಕುರಿತು ಸುಳ್ಯ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಅಭಿನಂದನ ಮಾತುಗಳನ್ನಾಡಳಿದ್ದಾರೆ. ಅತಿಥಿಗಳಾಗಿ ವೈದ್ಯರಾದ ಡಾ.ರಾಮಕಿಶೋರ್ ಕಾನಾವು, ಚಂದ್ರಹಾಸ ರೈ ಮುಕ್ಕೂರು, ಪ್ರಗತಿಪರ ಕೃಷಿಕ ಸಂಜೀವ ಗೌಡ ಬೈಲಂಗಡಿ, ಮುಕ್ಕೂರು ಜ್ಯೋತಿ ಯುವಕ ಮಂಡಲ ಅಧ್ಯಕ್ಷ ದಿನೇಶ್ ಕಂರ್ಬುತ್ತೋಡಿ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಭಾಗವಹಿಲಿದ್ದಾರೆ.

ಪ್ರತಿಭಾ ಪುರಸ್ಕಾರ
ಎಸೆಸೆಲ್ಸಿ, ಪಿಯುಸಿಯಲ್ಲಿ ಶೇ‌.90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ‌ ಮುಕ್ಕೂರು ಶಾಲೆಯಲ್ಲಿ ಶಿಕ್ಷಣ ಪಡೆದು ಈ ಬಾರಿ ಎಸೆಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಗರಿಷ್ಟ ಅಂಕ‌ ಪಡೆದ ಇಬ್ಬರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಬೆಳಗ್ಗೆ 9 ರಿಂದ 11 ಗಂಟೆ ತನಕ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 1 ನೇ ತರಗತಿಯಿಂದ‌ 3 ನೇ ತರಗತಿ‌ ವಿಭಾಗಕ್ಕೆ ಐಚ್ಛಿಕ, 4 ರಿಂದ 7 ನೇ ತರಗತಿ ವಿಭಾಗಕ್ಕೆ- ಐಚ್ಛಿಕ, 8 ರಿಂದ 10 ನೇ ತರಗತಿ ವಿಭಾಗದವರಿಗೆ ಚಿತ್ರ ಬಿಡಿಸಬೇಕಾದ ವಿಷಯವನ್ನು ಸ್ಥಳದಲ್ಲೇ ತಿಳಿಸಲಾಗುವುದು. ಸ್ಪರ್ಧಿಗೆ ಡ್ರಾಯಿಂಗ್ ಶೀಟ್ ಅನ್ನು ಸ್ಥಳದಲ್ಲಿ ನೀಡಲಾಗುವುದು. ಚಿತ್ರ ಬಿಡಿಸಲು ಬೇಕಾದ ಉಳಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಬಹುಮಾನ ನೀಡಲಾಗುತ್ತದೆ. ಯಾವುದೇ ತಾಲೂಕಿನ ವಿದ್ಯಾರ್ಥಿಗಳು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.

ಕ್ರೀಡಾಕೂಟ
ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಪುರುಷರ ವಿಭಾಗದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ಮಹಿಳಾ ವಿಭಾಗದಲ್ಲಿ ತ್ರೋಬಾಲ್, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆ ಗಳು ನಡೆಯಲಿದ್ದು‌ ಸಾರ್ವಜನಿಕರಿಗೆ ಮುಕ್ತ‌ ಪ್ರವೇಶ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here