ಸವಣೂರು : ಬಿರುಗಾಳಿಯಿಂದ ಹಾನಿಗೊಳಗಾದ ಸ್ಥಳಕ್ಕೆ ಗ್ರಾ.ಪಂ.ನಿಯೋಗ ಭೇಟಿ

0

ಸವಣೂರು: ಆ.19ರಂದು ಬೀಸಿದ ಭಾರಿ ಬಿರುಗಾಳಿಯಿಂದ ಹಾನಿಗೊಳಗಾದ ಸವಣೂರು ಗ್ರಾಮದ ಆರೇಲ್ತಡಿ, ಕೆಡೆಂಜಿ ಮೊದಲಾದ ಪ್ರದೇಶಕ್ಕೆ ಸವಣೂರು ಗ್ರಾ.ಪಂ.ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯಿಂದ ಸಾವಿರಾರು ಅಡಿಕೆ ಮರಗಳು,ತೆಂಗು, ಹಲವಾರು ಇತರೆ ಕೃಷಿ, ಮರಗಳು ಧರೆಗುರುಳಿದೆ. ವಿದ್ಯುತ್ ಕಂಬ, ಲೈನ್‌ಗಳಿಗೆ ಹಾನಿಯಾಗಿದೆ. ಹಲವೆಡೆ ಮರ, ಮರದ ಗೆಲ್ಲು ಬಿದ್ದು ಹಾನಿಯಾಗಿದೆ. ಹಲವೆಡೆ ರಸ್ತೆಗೆ ಮರ, ವಿದ್ಯುತ್ ಕಂಬಗಳು  ಬಿದ್ದು ಸಂಚಾರ ಬಂದ್ ಅಗಿತ್ತು. ಸ್ಥಳಿಯರು, ಇಲಾಖಾಧಿಕಾರಿಗಳು ಸೇರಿಕೊಂಡು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು. 

ಬಿರುಗಾಳಿಗೆ ಹಾನಿಯಾದ ಘಟನಾ ಸ್ಥಳಗಳಿಗೆ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್,ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಗ್ರಾ.ಪಂ.ಸದಸ್ಯರಾದ ರಾಜೀವಿ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ, ತೀರ್ಥರಾಮ ಕೆಡೆಂಜಿ, ಎಂ.ಎ.ರಫೀಕ್,ತಾರಾನಾಥ ಬೊಳಿಯಾಲ,ಮಾಜಿ ಸದಸ್ಯ ಸತೀಶ್ ಬಲ್ಯಾಯ ,ಸಿಬ್ಬಂದಿ ದಯಾನಂದ ಮಾಲೆತ್ತಾರು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here