ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸರಕಾರಿ ಪ್ರೌಢಶಾಲೆ ಸವಣೂರಿನಲ್ಲಿ ಆ. 21 ರಂದು ಜರುಗಿದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ತಂದಡದಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿಗಳಾದ ಮಂಥನ್,ಗುರುಕಿರಣ್,ಭುವನ್ ಕರಂದ್ಲಾಜೆ,ಲೋಹಿತ್ ,ರಂಜಿತ್,ಪ್ರಜ್ವಲ್ ಎಸ್ ಸಿ,ವಿಹಾಂತ್,ಯತಿರಾಜ್,ಜೀವನ್ ಎಸ್, ಗಗನ್ ಮನು, ಒಂಬತ್ತನೆಯ ಶಾಶ್ವತ್ ,ಪ್ರಥಮ್ , ಶ್ರೀಶ ಪ್ರತಿನಿಧಿಸಿದರು. ಮಂಥನ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡರು.
ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಪ್ರಸನ್ನ ಕೆ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಎ ವಿ ಹಾಗೂ ಜಯಚಂದ್ರ ತರಬೇತಿಯನ್ನು ನೀಡಿದ್ದಾರೆ.