ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ Robotics ಕಾರ್ಯಗಾರ

0

ಪುತ್ತೂರು: ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ಬೆಳೆಯುವ ಮಕ್ಕಳಿಗೆ ಕ್ರಿಯಾಶೀಲತೆ ಮತ್ತು ತಾರ್ಕಿಕ ಚಿಂತನೆ ಅನಿವಾರ್ಯ. ಈ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ‘Hands – on workshop on Robotics’ ಎಂಬ ಕಾರ್ಯಗಾರವು ಆ.19ರಂದು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ STEM education ಸಹಯೋಗದೊಂದಿಗೆ Spark innovations ನೇತೃತ್ವದಲ್ಲಿ ನಡೆಯಿತು. 

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಕೃಷ್ಣ ಪ್ರಭು ಮತ್ತು ಅವರ ತಂಡ ಪಾಲ್ಗೊಂಡು ಮಕ್ಕಳನ್ನು ರೋಬೋಟಿಕ್ಸ್ ಎಂಬ ಅದ್ಭುತ ಜಗತ್ತಿಗೆ ಕೊಂಡೊಯ್ದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿಗೆಪೂರಕವಾಗಿ ವಿದ್ಯಾರ್ಥಿಗಳೇ ರೋಬೋಟ್ ತಯಾರಿಸುವಂತೆ ಮಾಡಿ ತಂಡವಾರು ಸ್ಪರ್ಧೆಗಳನ್ನು ಏರ್ಪಡಿಸಿದರು. 
ಕಾರ್ಯಗಾರವು ವಿಜ್ಞಾನ ವಿಭಾಗದ ಅಧ್ಯಾಪಕ ವೃಂದದವರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು ಎಂದು ಶಾಲಾ ಮುಖ್ಯ ಗುರುಗಳಾದ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here