ಪುತ್ತೂರು: ಪವಿತ್ರ ರಬೀವುಲ್ ಅವ್ವಲ್ ತಿಂಗಳನ್ನು ಸ್ವಾಗತಿಸುವ ‘ಮರ್ಹಬಾ ಯಾ ಶಹ್ರ ರಬೀಅ’ ಕಾರ್ಯಕ್ರಮ ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಪುತ್ತೂರು ರಬಿವುಲ್ ಅವ್ವಲ್ ತಿಂಗಳಲ್ಲಿ ಸಂಸ್ಥೆಯ ವತಿಯಿಂದ ನಡೆಸುವ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಮತ್ತು ಮೌಲಿದ್ ಆಧ್ಯಾತ್ಮಿಕ ಸಂಗಮದ ಬಗ್ಗೆ ಮಾಹಿತಿ ನೀಡಿದರು.
ದಾರುಲ್ ಹಸನಿಯಾ ಜುಬೈಲ್ ಘಟಕದ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ಜುಬೈಲ್ ಘಟಕದ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ದಮಾಮ್ ಘಟಕದ ಗೌರವಾಧ್ಯಕ್ಷ ಹಾಜಿ ಅಮ್ಜದ್ ಖಾನ್ ಪೋಳ್ಯ, ಜುಬೈಲ್ ಘಟಕದ ಮುಖಂಡರಾದ ತ್ವಾಹಿರ್ ಸಾಲ್ಮರ, ತಹ್ಸೀರ್ ದರ್ಬೆ, ಸಂಸ್ಥೆಯ ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ರಫೀಕ್ ಹಾಜಿ ಸುಲ್ತಾನ್ ಕೊಡಾಜೆ, ಡಾ.ಶರಫಝ್ ದರ್ಬೆ, ಬಶೀರ್ ಹಾಜಿ ದರ್ಬೆ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ ಕೂರ್ನಡ್ಕ, ಶರೀಫ್ ಹಾಜಿ ಕೊಡಾಜೆ, ಅಬ್ದುಲ್ ಕರೀಂ ದಾರಿಮಿ ದರ್ಬೆ, ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ , ಅಶ್ರಫ್ ಹಾಜಿ ಪರ್ಲಡ್ಕ, ರಿಯಾಝ್ ಹಾಜಿ ಇಂಜಿನಿಯರ್ ವಳತ್ತಡ್ಕ, ಉಮರ್ ಹಾಜಿ ಸಂಪ್ಯ, ಅಬ್ದುಲ್ ಲತೀಫ್ ಕೊಡಿಪ್ಪಾಡಿ, ಶಾಹುಲ್ ಹಮೀದ್ ಕೊಡಂಗಾಯಿ, ಅಬ್ದುಲ್ ಹಮೀದ್ ಡಿ.ಕೆ ಕೆಮ್ಮಾಯಿ, ಅಬ್ದುಲ್ ರಶೀದ್ ಹಾಜಿ ನೈತಾಡಿ ಮೊದಲಾದವರು ಶುಭ ಹಾರೈಸಿದರು. ಸಂಸ್ಥೆಯ ಸಂಯೋಜಕ ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಸ್ವಾಗತಿಸಿ ವಂದಿಸಿದರು.