ಪುತ್ತೂರು: ಶ್ರೀ ಶಿವ್ಛತ್ರಪತಿ ಮರಾಠ ಗಣೇಶ್ ಉತ್ಸವ್ ಮಂಡಲ್ ವತಿಯಿಂದ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆ.27ರಂದು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, 8.35ಕ್ಕೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದ್ದು, ಆಗಮಿಸಿದ ಭಕ್ತರಿಗೆ 9 ಗಂಟೆಯಿಂದ ಉಪಹಾರದ ವ್ಯವಸ್ಥೆ ಇರಲಿದೆ. ಮಧ್ಯಾಹ್ನ 12.45ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ. 2 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, 4 ಗಂಟೆಗೆ ಮಹಾ ಮಂಗಳಾರತಿ ನಡೆದು ಗಣೇಶನ ಭವ್ಯ ಶೋಭಯಾತ್ರೆ ನಡೆಯಲಿದೆ.
ಕಳೆದ ವರ್ಷ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮಾತೃಛಾಯ ಹಾಲ್ ನಲ್ಲಿ ಈ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಭಕ್ತರ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ಸುಕೃತೀಂದ್ರ ಕಲಾ ಮಂದಿರಲ್ಲಿ ಆಯೋಜಿಸಲಾಗಿದೆ. ಆ ಪ್ರಯುಕ್ತ ತಾವೆಲ್ಲರೂ ಬಂಧು-ಮಿತ್ರರೊಡಗೂಡಿ ಭಾಗವಹಿಸಿ ತನು-ಮನ ಧನಗಳಿಂದ ಸಹಕರಿಸುವಂತೆ ಶ್ರೀ ಗಣೇಶೋತ್ಸವ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.