ಕಾಂಚನ: ವಿಕ್ರಂ ಯುವಕ ಮಂಡಲದ ಆಶ್ರಯದಲ್ಲಿ 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಆಚರಣೆ ಕಾಂಚನ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಭಜನಾ ಮಂಡಳಿಯ ಕೇಶವ ಆಗರ್ತಿಮಾರು, ಭದ್ರಪ್ಪ ಆಗರ್ತಿಮಾರು,ಶರತ್ ಮುದ್ಯ, ಸುರೇಶ್ ಬಿದಿರಾಡಿ,ಉಮೇಶ್ ನೆಕ್ಕರೆ, ಗಂಗಾಧರ್, ದುಗ್ಗಪ್ಪ, ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಉದ್ಘಾಟನಾ ಸಮಾರಂಭ ನಡೆಯಿತು.

ಅಡ್ಡ ಕಂಬ ಜಾರುವ ಸ್ಪರ್ಧೆಯನ್ನು ಪ್ರಗತಿಪರ ಕೃಷಿಕರಾದ ಸುರೇಶ್ ಬಿದಿರಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ಮಡಿಕೆ ಒಡೆಯುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿದರು.ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಚಂದ್ರಶೇಖರ, ಕಾಂಚನ ಸ್ಟುಡಿಯೋ ಮಾಲಕರಾದ ಲಕ್ಷ್ಮಿನಾರಾಯಣ ಅರಮ, ಕಾಂಚನ ಪ್ರೌಢಶಾಲೆ ಮುಖ್ಯಗುರು ರಮೇಶ್ ಮಯ್ಯ ಮತ್ತು ಪ್ರಾಥಮಿಕ ಶಾಲಾ ಮುಖ್ಯಗುರು ಲಕ್ಷ್ಮಣ ಗೌಡ, ಭಾಗವಹಿಸಿದ್ದರು.ಅಧ್ಯಕ್ಷತೆ ವಿಕ್ರಂ ಯುವಕ ಮಂಡಲದ ಅಧ್ಯಕ್ಷ ರಾಮಚಂದ್ರ ಕಾಂಚನ ವಹಿಸಿದ್ದರು. ವೇದಿಕೆಯಲ್ಲಿ ಅನಿಲ್ ಪಿಂಟೊ ಪುಯಿಲ , ಮೋನಪ್ಪ ಗೌಡ ಪುಯಿಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯುವಕ ಮಂಡಲದ ವತಿಯಿಂದ ಸ್ಥಳೀಯ ಶಿಕ್ಷಣ ಸಂಸ್ಥೆಗಳ 10 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ರೂಪಾಯಿ 20000 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಇದರಲ್ಲಿ ರೂಪಾಯಿ 6000 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನಕ್ಕೆ ದಿವಂಗತ ಎ.ಬಿ.ಪ್ರಕಾಶ್ ಸ್ಮರಣಾರ್ಥ ಅವರ ಧರ್ಮಪತ್ನಿ ಜಲಜಾಕ್ಷಿ ನೀಡಿ ಸಹಕರಿಸಿದರು. ಸಭಾ ಅಧ್ಯಕ್ಷರಾದ ರಾಮಚಂದ್ರ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು.ಕಾರ್ಯದರ್ಶಿ ಗಿರೀಶ್ ಮುದ್ಯ ವಂದಿಸಿದರು. ಉಪನ್ಯಾಸಕ ಮೋಹನ್ ಚಂದ್ರ ತೋಟದ ಮನೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ವೇಶ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಶಾರ್ವಿ ಅರ್ಗತಿಮಾರು ಮತ್ತು ದ್ವಿತೀಯ ಸ್ಥಾನ ಅಭಿನವ್ ತೋಟದ ಮನೆ,ಪದಕ ಪಡೆದುಕೊಂಡರು.ಶಾಲಾ ಮಕ್ಕಳಿಗೆ, ಪುರುಷರಿಗೆ , ಮಹಿಳೆಯರಿಗೆ ಶ್ರೀ ಕೃಷ್ಣನ ಹಾಡು,ಅದೃಷ್ಟದ ಆಟ, ಹಗ್ಗಜಗ್ಗಾಟ, ವಾಲಿಬಾಲ್, ತ್ರೋಬಾಲ್, ಸಂಗೀತ ಕುರ್ಚಿ, ಬಕೆಟ್ ಗೆ ಬಾಲ್ ಹಾಕುವ ,ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆಗಳು ನಡೆಯಿತು.ಹೇಮಂತ್ ನೆಕ್ಕರೆ, ದೈಹಿಕ ಶಿಕ್ಷಕ ರಾಧಾಕೃಷ್ಣ ಮಂಜಿಪಲ್ಲ , ಸಚಿನ್ ಮುದ್ಯ , ಗಿರೀಶ್ ಮುದ್ಯ, ಜಯರಾಮ ಪದಕ, ತ್ಯಾಗ ರಾಜ್ ಕಾಂಚನ, ನವೀನ್ ಪುಯಿಲ, ರಾಮಣ್ಣ ಪುಯಿಲ, ದಯಾನಂದ, ರಾಜೇಶ್, ಧನಂಜಯ ಪುಯಿಲ, ರಾಮಚಂದ್ರ, ವೀರಸ್ವಾಮಿ ಆಟೋಟ ಸ್ಪರ್ಧೆಗಳ ನಿರ್ವಹಣೆಗೆ ಸಹಕರಿಸಿದರು.ಬೆಳಿಗ್ಗಿನ ಉಪಾಹಾರ ವ್ಯವಸ್ಥೆಯನ್ನು ಶಂಕರ್ ನಾಯಕ್ ಹೋಟೆಲ್ ನೀಡಿ ಸಹಕರಿಸಿದರು.
ಹೊನ್ನಪ್ಪ ಪುಯಿಲ ,ಎಲ್ಯಣ್ಣ ಶಿವಪುರ, ಮನೋಜ್, ಶ್ರೀನಿವಾಸ, ಬಾಲಕೃಷ್ಣ ಮಧ್ಯಾಹ್ನದ ಭೋಜನದ ವ್ಯವಸ್ಥೆಗೆ ಸಹಕರಿಸಿದರು. ಗ್ರಾಮ ಪಂಚಾಯಿತ್ ಸದಸ್ಯರಾದ ಸ್ಮಿತಾ ಪುಯಿಲ, ವಿಕ್ರಂ ಯುವಕ ಮಂಡಲದ ಪೂರ್ವಾಧ್ಯಕ್ಷ ಡೆನ್ನಿಸ್ ಪಿಂಟೊ, ಶಿವರಾಂ ಕಾರಂತ, ಶ್ರೀಧರ್ ಮುದ್ಯ , ಹರೀಶ್ಚಂದ್ರ ಮುದ್ಯ, ಮಹೇಶ್ ಬಜತ್ತೂರು,ಚಂದ್ರಶೇಖರ , ಆನಂದ ಮೇಲೂರು, ಮೋನಪ್ಪ ಡೆಂಬಲೆ, ಮುಕುಂದ ಬಜತ್ತೂರು,ಹರೀಶ್ ಉರಾಬೆ, ದಿನೇಶ್ ನಡ್ಪ, ರುಕ್ಮಯ ಪುಯಿಲ , ಸೇಸಪ್ಪ ಓಪಾತಿಪಾಲು, ಸ್ಥಳೀಯ ಶಾಲೆಯ ಶಿಕ್ಷಕ ರಕ್ಷಕ ಅಧ್ಯಕ್ಷರಾದ ಮಧುಶ್ರೀ ಯಾದವ ಗೌಡ ನೆಕ್ಕರೆ,ನಯನ ಹರೀಶ್ ಉರಾಬೆ ಸೇರಿದಂತೆ ಸ್ಥಳೀಯ ಶಾಲೆಯ ಮಕ್ಕಳು,ಶಿಕ್ಷಕ ವರ್ಗ, ಪೋಷಕರು ಸೇರಿದಂತೆ 600 ಮಿಕ್ಕಿ ಜನರು ಭಾಗವಹಿಸಿದ್ದರು.