ಪುತ್ತೂರು: ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಮತ್ತು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು. ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ವತಿಯಿಂದ,ತಾಲೂಕು ಮಟ್ಟದ ಸ್ಪರ್ಧೆ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮ ಉದ್ಘಾಟಿಸಿ ವಾತ್ಸಲ್ಯಮಯಿ ಸಂಸ್ಥೆ ಯು ಮಕ್ಕಳ ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಅಲ್ಲದೆ ಜವಹಾರ್ ಬಾಲ್ ಮಂಚ್ ಅನ್ನುವ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಗಳನ್ನು ನೀಡುತ್ತಿದೆ ವ್ಯಕ್ತಿತ್ವ ವಿಕಸನ ನಾಯಕತ್ವ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ ಯವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಸಂಸ್ಥೆಯ ಕೆಲಸ ಕಾರ್ಯಗಳು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ವಹಿಸಿದ ನ್ಯಾಯವಾದಿ, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ ಮತ್ತು. ಜವಾಹರ್ ಬಾಲ್ ಮಂಚ್ ನ ಜಿಲ್ಲಾಧ್ಯಕ್ಷರು ಶೈಲಜಾ ರಾಜೇಶ್ ಅವರು ಮಾತನಾಡಿ ನಮ್ಮ ಸಂಸ್ಥೆ ಮಕ್ಕಳ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಅಪಾರವಾದಕಾಳಜಿ ಹೊಂದಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಷ್ಟೋ ನೊಂದ ಕುಟುಂಬಗಳಿಗೆ ಆಶ್ರಯ ನೀಡುತ್ತಿದೆ. ಎಲ್ಲಾ ಮಕ್ಕಳು ಮಾನವೀಯತೆ ಪ್ರಾಮಾಣಿಕತೆ ಮತ್ತು ಪ್ರೀತಿ, ವಿಶ್ವಾಸದಿಂದ ಸಂಸ್ಕಾರಯುತ ಜೀವನ ನಡೆಸಬೇಕು ಮತ್ತು ಎಲ್ಲಾ ಮಕ್ಜಳಿಗೂ ಪ್ರತಿಭೆಗೆ ಅವಕಾಶ ನೀಡುತ್ತಿದೆ ಎಂದರು.
ಇದೇ ಸಂದರ್ಭ ಶಾಸಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜವಾಹರ್ ಬಾಲ್ ಮಂಚ್ ನ ರಾಷ್ಟ್ರೀಯ ಸಂಯೋಜಕರು ನರೇಶ್ ಕುಮಾರ್, ರಾಜ್ಯ ಅಧ್ಯಕ್ಷ ಮೊಯೀನುದ್ದಿನ್ , ಸಂಯೋಜಕರು ಡಾ.ಸೋಫಿಯಾ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರು ಶೌರ್ಯ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ್ ರೈ, ಬೇಬಿಕುಂದರ್, ಉಷಾ, ಚಂದ್ರಪ್ರಭಾ, ಉಪಸ್ಥಿತರಿದ್ದರು. ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಜ್ಞಾ ಒಡಿನಾಲ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ರಾಜೇಶ್ ಸ್ವಾಗತಿಸಿ, ಪ್ರವೀಣ್ ಆಚಾರ್ಯ ವಂದಿಸಿದರು. ಜವಾಹರ್ ಬಾಲ್ ಮಂಚ್ ನ ತಾಲೂಕು ಸದಸ್ಯರು ಪ್ರವೀಣ್ ಆಚಾರ್ಯ, ಜಯಶೀಲಾ, ಹಕ್ಕಿಮ್, ಗಿರೀಶ್, ಕಾವ್ಯ ರಾಮಲತ್ ಉಪಸ್ಥಿತರಿದ್ದರು.