ಪುತ್ತೂರು: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆ.24ರಂದು ಸಂಜೆ ಉಪ್ಪಿನಂಗಡಿ ಗ್ರಾಮದ ಹಿರೇಬಂಡಾಡಿ ಕ್ರಾಸ್ನಲ್ಲಿ ನಡೆದಿದೆ.
ನೆಲ್ಯಾಡಿ ಗ್ರಾಮದ ಕೊಪ್ಪ ನಿವಾಸಿ ಲಿಜೋ ವರ್ಗೀಸ್ ಅವರು ಮಂಗಳೂರಿನಿಂದ ನೆಲ್ಯಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು (ಕೆಎ21, ಎನ್ 5860) ಹಾಗೂ ರಾಜು ಎಂಬವರು ಸರೋಜಿನಿ ಎಂಬವರನ್ನು ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ (ಕೆಎ21, ಕ್ಯು 6010) ನಡುವೆ ಉಪ್ಪಿನಂಗಡಿ ಗ್ರಾಮದ ಹಿರೇಬಂಡಾಡಿ ಕ್ರಾಸ್ನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ರಾಜು ಹಾಗೂ ಸಹಸವಾರೆ ಸರೋಜಿನಿ ಅವರು ಬೈಕ್ ಸಮೇತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಿಜೋ ವರ್ಗೀಸ್ ಅವರು ನೀಡಿದ ದೂರಿನಂತೆ ಬೈಕ್ ಸವಾರನ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.