ಎಸ್ಸೆಸ್ಸೆಫ್ ಮಾಡಾವು ಸೆಕ್ಟರ್: ಸಾಹಿತ್ಯೋತ್ಸವ ಸ್ವಾಗತ ಸಮಿತಿ ರಚನೆ

0

ಪುತ್ತೂರು: ಎಸ್ಸೆಸ್ಸೆಫ್ ಮಾಡಾವು ಸೆಕ್ಟರ್ ಸಾಹಿತ್ಯೋತ್ಸವ ಆ.31ರಂದು ಕಾವು ಬದ್ರಿಯಾ ಮಜ್ಲಿಸ್ ನಲ್ಲಿ ನಡೆಯಲಿದೆ. ಅದರ ನಿರ್ವಹಣೆಗಾಗಿ ಕಟ್ಟತ್ತಾರು ಸುನ್ನೀ ಸೆಂಟರ್ ನಲ್ಲಿ ಸೆಕ್ಟರ್ ಅಧ್ಯಕ್ಷ ಶಹೀಮ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.


ಚೇರ್ಮನ್ ಆಗಿ ಮುಹಮ್ಮದ್ ಬಾಯಂಬಾಡಿ, ಜನರಲ್ ಕನ್ವೀನರ್ ಅಬ್ದುಲ್ ಅಝೀಝ್ ಚೆನ್ನಾರ್, ಫೈನಾನ್ಸಿಯಲ್ ಸೆಕ್ರೆಟರಿ ಆಗಿ ಶಾಕಿರ್ ಬಾಯಂಬಾಡಿರವರನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಹಂಝತುಲ್ಲತೀಫಿ ಬಾಯಂಬಾಡಿ, ಎಮ್ ಎಮ್ ಅಬೂಬಕರ್ ಹಾಜಿ, ಉಮರ್ ಹಾಜಿ ಎಲಿಮಲೆ, ಇಬ್ರಾಹಿಮ್ ಕೈಕಂಬ, ಪುತ್ತುಂಞಿ ಹಾಜಿ ಬಾಯಂಬಾಡಿ, ಎಂ ಎಂ ಹುಸೈನ್ ಮುಸ್ಲಿಯಾರ್, ಮೂಸ ಅಮ್ಚಿನಡ್ಕ, ಮುಹಮ್ಮದ್ ಕುಂಡಡ್ಕ, ವೈಸ್ ಕನ್ವೀನರ್ ಗಳಾಗಿ ಫವಾಝ್ ಕಟ್ಟತ್ತಾರು, ಶಾಫಿ ಮದನಿ ಮಾಡಾವು, ಎಂಪಿ ಹಂಝ ಅರಿಕ್ಕಿಲ, ನಾಸಿರ್ ಸಖಾಫಿ ಕಟ್ಟತ್ತಾರು, ಇಸ್ಮಾಯಿಲ್ ಅರಿಕ್ಕಿಲ, ಇಬ್ರಾಹಿಂ ಮುಸ್ಲಿಯಾರ್ ಅಮ್ಚಿನಡ್ಕ, ಇಸಾಕ್ ಮಾಡಾವು, ಶರೀಫ್ ಬಾಯಂಬಾಡಿ, ಜಮಾಲ್ ಮಾಡಾವು, ಕೋಡಿನೇಟರ್ ಗಳಾಗಿ ಮುಹ್ಸಿನ್ ಕಟ್ಟತ್ತಾರು ಆಯ್ಕೆಯಾದರು. ಹಾಗೂ 33 ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.


ಹಂಝ ಲತೀಫಿ ಬಾಯಂಬಾಡಿ ಸಭೆ ಉದ್ಘಾಟಿಸಿದರು. ಮುಹ್ಸಿನ್ ಕಟ್ಟತ್ತಾರು ಸಾಹಿತ್ಯೋತ್ಸವದ ಬಗ್ಗೆ ಮಾಹಿತಿ ನೀಡಿದರು. ಚೇರ್ಮನ್ ಮುಹಮ್ಮದ್ ಬಾಯಂಬಾಡಿ ಮಾತನಾಡಿದರು ಎಸ್ಸೆಸ್ಸೆಫ್ ಪ್ರ.ಕಾರ್ಯದರ್ಶಿ ಶರೀಫ್ ಕಟ್ಟತ್ತಾರು ಸ್ವಾಗತಿಸಿದರು. ಕನ್ವೀನರ್ ಅಬ್ದುಲ್ ಅಝೀಝ್ ಚೆನ್ನಾರ್ ವಂದಿಸಿದರು.

LEAVE A REPLY

Please enter your comment!
Please enter your name here