ಪುತ್ತೂರು : ಹಲವಾರು ವರ್ಷಗಳಿಂದ ಪ್ರಕೃತಿಗೆ ಹಾನಿಯನ್ನು ಉಂಟು ಮಾಡದ ವಸ್ತುಗಳಿಂದ ನಾನಾ ರೀತಿಯಲ್ಲಿ ಗಣೇಶನ ಮೂರ್ತಿಯನ್ನು ರಚಿಸುತ್ತಿರುವ ಕಲ್ಲಾರೆಯಲ್ಲಿರುವ ವರ್ಣಕುಟೀರದ ಪ್ರವೀಣ್ ಅವರು ಈ ಬಾರಿ ಪ್ರಿಜ್ಡ್ಗಳಿಗೆ ಬಳಸುವ ಪಿ ಯು ಫೋಮ್ ಬಳಸಿ ವಿವಿಧ ಭಂಗಿಗಳ ಗಣಪತಿಗಳ ವಿಗ್ರಹಗಳನ್ನು ರಚನೆ ಮಾಡಿದ್ದಾರೆ.
ಪ್ರಕೃತಿಗೆ ಯಾವುದೇ ಹಾನಿಯನ್ನು ಮಾಡದ ವಸ್ತುಗಳಿಂದ ನಾನಾ ರೀತಿಯ ಗಣಪನ ವಿಗ್ರಹ ಮಾಡುತ್ತಾ ಬಂದಿರುವ ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್ನಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಪ್ರವೀಣ್ ಅವರು ಈ ಹಿಂದೆ ಮಾಡಿದ ಒಂದು ಸಾಸಿವೆ ಕಾಳಿನಲ್ಲಿ ರೇಖಾ ಚಿತ್ರ, ಬಿದಿರಿನಲ್ಲಿ ಮಾಡಿದ ಗಣಪ, ಪ್ರೇಮ್ ಒಯಸೀಸ್ ಬ್ರಿಗ್ಸ್, ಡೀಪ್ ಶೀಟ್ ಒಂದು ಪೆನ್ಸಿಲ್ ಮೊನೆಯ ಗಣಪನ ಕೆತ್ತನೆ ಶಿಲ್ಪ, ಮಣ್ಣಿನಿಂದ ಮಾಡಿದ ಪುಟ್ಟ ಗಣಪ, ಪೆನ್ನಿನ ರೀಫಿಲ್ನಲ್ಲಿ, ಐಸ್ಕ್ಯಾಂಡಿ ಕಡ್ಡಿಯಲ್ಲಿ, ಬೆಂಕಿ ಕಡ್ಡಿಯಲ್ಲಿ ಮಾಡಿದ ಗಣಪ, ಎಲೆಕ್ಟ್ರಾನಿಕ್ ಬಿಡಿಭಾಗಗಳಲ್ಲಿ ಸಣ್ಣ ಸಣ್ಣ ಗಣಪ, ಮೋಲ್ಡಿಟ್ ಎಂಬ ವಸ್ತುವಿನಿಂದ ಮೂಡಿದ ಗಣಪತಿ ಮೂರ್ತಿಗಳು, ನೀರಿನ ಪೈಪ್ ಮತ್ತು ವಯರಿಂಗ್ ಪೈಪ್ಗಳ ತುಂಡುಗಳನ್ನು ಬಳಸಿಕೊಂಡು ಪಂಚ ಭೂತಗಳನ್ನು ಗಣಪತಿ ಮೂರ್ತಿ, ನೀರಿನಲ್ಲಿ ತೇಲುವ ಎಎಸಿ ಬ್ಲಾಕ್ಗಳಿಂದ ಮಾಡಿದ ಗಣಪತಿ ಮತ್ತು ಕಳೆದ ವರ್ಷ ಬಾಟಲ್ ಕಾರ್ಕ್ನಿಂದ ಮಾಡಿದ ಗಣಪತಿ ವಿಗ್ರಹಗಳು ಜನಮಾನಸದಲ್ಲಿ ಪ್ರಸಿದ್ದಿ ಪಡೆದಿತ್ತು. ಇದೀಗ ಪ್ರಿಡ್ಜ್ಗಳಿಗೆ ಬಳಸುವ ಪಿ ಯು ಫೋಮ್ಗಳನ್ನು ಬಳಸಿಕೊಂಡು ಗಣಪತಿಗಳನ್ನು ರಚಿಸಿದ್ದಾರೆ.
ಮಕ್ಕಳಲ್ಲಿ ಕಲಾ ನೈಪುಣ್ಯತೆ ಪ್ರೋತ್ಸಾಹ
ವರ್ಣಕುಟೀರದಲ್ಲಿ ಮಕ್ಕಳಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮತ್ತು ಮಕ್ಕಳಿಗೆ ಕ್ರಾಫ್ಟ್ ಗಳನ್ನು ಕಳೆದ ಹಲವು ವರ್ಷಗಳಿಂದ ಹೇಳಿಕೊಡುತ್ತಾ ಬಂದಿದ್ದು, ಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ಚಿತ್ರಕಲಾ, ಕ್ಲೇ ಮೊಡೆಲಿಂಗ್, ಸ್ಯಾಂಡ್ವುಡ್ ಆರ್ಟ್, ಸಂಗೀತ, ಕೀ ಬೋರ್ಡ್ ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳಿಗೆ ಗಣಪತಿಯ ಸ್ತ್ರೋತ್ರಗಳು ಮತ್ತು ಗಣಪತಿ ಹೋಮದ ಮಂತ್ರಗಳನ್ನು ಚಿತ್ರದಲ್ಲಿ ಬರೆಯುವ ಮೂಲಕ ಇತ್ತೀಚೆಗೆ ಮಂತ್ರಾದೀನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಕಲೆಗಳು ಮಕ್ಕಳಿಗೆ ಕೊಡಿಸುವ ಪ್ರಯತ್ನ ನಮ್ಮದು
ಪ್ರವೀಣ್ ವರ್ಣಕುಟೀರ