ಪುತ್ತೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ನಟ ಸ್ವರಾಜ್ ಶೆಟ್ಟಿ ನಿರ್ದೇಶನ ಹಾಗೂ ಉದ್ಯಮಿ ಲಂಚುಲಾಲ್ ಕೆ.ಎಸ್ ನಿರ್ಮಿಸಿರುವ ತುಳುವಿನ “ನೆತ್ತೆರೆಕೆರೆ’ ಸಿನೆಮಾ ಆ.29ರಿಂದ ಕರಾವಳಿಯಾದ್ಯಂತ ತೆರೆಕಾಣಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಟ, ನಿರ್ದೇಶಕ ಸ್ವರಾಜ್ ಶೆಟ್ಟಿ ಅವರು ಮಾತನಾಡಿ, ಈ ಸಿನೆಮಾ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದೆ. ಪ್ರಸಕ್ತ ಇರುವ ತುಳು ಸಿನೆಮಾದ ಚೌಕಟ್ಟನ್ನು ಮೀರಿ ಹೊಸ ಬಗೆಯ ದೃಷ್ಟಿಯಿಂದ ಈ ಸಿನೆಮಾ ರೂಪಿಸಿದ್ದು, ಜಾಗತಿಕವಾಗಿಯೂ ಮಾತನಾಡುವ ಶಕ್ತಿ ಪಡೆಯಲಿದೆ. ಕನ್ನಡ ಸಹಿತ ಇತರ ಭಾಷೆಯಲ್ಲೂ ಇದನ್ನು ತೆರೆಗೆ ತರುವ ಪ್ರಯತ್ನ ನಡೆಯಲಿದೆ ಎಂದರು. ಚೇಳಾರ್, ಮೂಲ್ಕಿ, ಕಿನ್ನಿಗೋಳಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜತೆಗೆ ನಾಯಕ ನಟನಾಗಿ ನಾನು ಅಭಿನಯಿಸಿದ್ದೇನೆ. ನಾಯಕಿಯಾಗಿ ದಿಶಾಲಿ ಪೂಜಾರಿ ಹಾಗೂ ವಿಶೇಷ ಪಾತ್ರದಲ್ಲಿ ಹಿರಿಯ ನಟ ಸುಮನ್ ತಲ್ವಾರ್, ಲಂಚುಲಾಲ್ ಕೆ.ಎಸ್ ಅಭಿನಯಿಸಿದ್ದಾರೆ. ಯುವ ಶೆಟ್ಟಿ, ಪುಷ್ಪರಾಜ್ ಬೊಳ್ಳೂರು, ಅನಿಲ್ ಉಪ್ಪಳ, ಭವ್ಯಾ ಪೂಜಾರಿ, ಪೃಥ್ವಿನ್ ಪೊಳಲಿ, ಉತ್ಸವ್ ವಾಮಂಜೂರು, ನೀತ್ ಪೂಜಾರಿ, ವಿಜಯ ಮಯ್ಯ, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ ಚಿತ್ರದಲ್ಲಿದ್ದಾರೆ ಎಂದವರು ಹೇಳಿದರು.
ಕ್ಯಾಮರಾದಲ್ಲಿ ಉದಯ ಬಲ್ಲಾಳ್, ಸಂಗೀತ ವಿನೋದ್ ರಾಜ್ ಕೋಕಿಲಾ, ಸಂಕಲನ ಗಣೇಶ್ ನೀರ್ಚಾಲ್, ಸಾಹಸ ಮಾಸ್ ಮಾದ, ಟೈಗರ್ ಶಿವ, ಎಕ್ಸಿಟಿವ್ ಪ್ರೊಡ್ಯುಸರ್ ಯತೀಶ್ ಪೂಜಾರಿ, ಲೈನ್ ಪ್ರೊಡ್ಯುಸರ್ ಆಗಿ ವಿಜಯ ಮಯ್ಯ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ರಾಜೇಶ್ ಕುಡ್ಲ, ನಿರ್ದೇಶನ ವಿಭಾಗದಲ್ಲಿ ಅವಿನಾಶ್ ಎಸ್ ಆಪ್ತ, ನೀತ್ ಪೂಜಾರಿ, ಕಾರ್ತಿಕ್ ಜಯಚಂದ್ರನ್, ತುಳಸಿದಾಸ್ ಮಂಜೇಶ್ವರ್, ಮೇಕಪ್ನಲ್ಲಿ ಚೇತನ್, ಆರ್ಟ್ ವಿಪಿನ್ ಸಹಕರಿಸಿದ್ದಾರೆ ಎಂದರು. ಚಿತ್ರದ ನಾಯಕ ನಟಿ ದಿಶಾಲಿ ಪೂಜಾರಿ, ನಟರಾದ ಭವ್ಯಾ ಪೂಜಾರಿ, ಪೃಥ್ವಿನ್ ಪೊಳಲಿ, ಉತ್ಸವ್ ವಾಮಂಜೂರು ಅವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.