ಪುತ್ತೂರು: ಕಂದಾಯ ಇಲಾಖೆಯ ಉಪ್ಪಿನಂಗಡಿ ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿರುವ ಚೆನ್ನಪ್ಪ ಗೌಡರವರು ಆ.30ರಂದು ವಯೋ ನಿವೃತ್ತಿ ಹೊಂದಲಿದ್ದಾರೆ.
1996ರ ನವಂಬರ್ ನಲ್ಲಿ ಕಂದಾಯ ಇಲಾಖೆಯ ಬಂಟ್ವಾಳ ತಾಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದರು. ಅಲ್ಲಿ ಸುಮಾರು 4 ತಿಂಗಳ ಕಾಲ ಕರ್ತವ್ಯ ನಿರ್ವಹಿಸಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮವಾಸೆಬೈಲು ಗ್ರಾಮಕ್ಕೆ ಗ್ರಾಮಕರಣಿಕರಾಗಿ ವರ್ಗಾವಣೆಗೊಂಡಿದ್ದರು. ಅಲ್ಲಿ 3 ತಿಂಗಳ ಕಾಲ ಕರ್ತವ್ಯ ನಿರ್ವಹಿಸಿ 1997ರಲ್ಲಿ ಪುತ್ತೂರು ತಾಲೂಕಿನ ಶಿರಾಡಿಗೆ ಗ್ರಾಮಕರಣಿಕರಾಗಿ ವರ್ಗಾವಣೆಗೊಂಡಿದ್ದರು. ಇದೇ ವೇಳೆ ಸಿರಿಬಾಗಿಲು, ಕೊಣಾಜೆ ಹಾಗೂ ಇಚ್ಲಂಪಾಡಿ ಗ್ರಾಮಗಳಲ್ಲಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸಿದರು. 2004ರಲ್ಲಿ ಚಿಕ್ಕಮುಡ್ನೂರು ಗ್ರಾಮಕ್ಕೆ ವರ್ಗಾವಣೆಗೊಂಡು ಕೊಡಿಪ್ಪಾಡಿ, ಬನ್ನೂರು ಹಾಗೂ ಉಪ್ಪಿನಂಗಡಿ ಗ್ರಾಮಗಳಲ್ಲಿ ಪ್ರಭಾರ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2014ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಮುಂಭಡ್ತಿ ಪಡೆದು ಪುತ್ತೂರು ತಾಲೂಕು ಕಚೇರಿಗೆ ವರ್ಗಾವಣೆಗೊಂಡಿದ್ದರು. 2021ರಲ್ಲಿ ಉಪ ತಹಶೀಲ್ದಾರ್ ಆಗಿ ಭಡ್ತಿ ಪಡೆದು ಉಪ್ಪಿನಂಗಡಿ ನಾಡಕಚೇರಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿದ್ದರು. 2024ರಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಪತ್ನಿ ವಸಂತಿ, ಪುತ್ರ ವಿಜೇತ್ ಕುಮಾರ್, ಸೊಸೆ ಆಶ್ರಿತಾ ಹಾಗೂ ಪುತ್ರಿ ನವ್ಯಶ್ರೀರವರೊಂದಿಗೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಪಾಂಡೇಲುನಲ್ಲಿ ವಾಸ್ತವ್ಯವಿದ್ದಾರೆ.