ಪುತ್ತೂರು: ಕೊಂಬೆಟ್ಟು ನಿವಾಸಿ ನಿವೃತ್ತ ಪ್ರಾಂಶುಪಾಲ ಶ್ರೀಪತಿ ರಾವ್(79ವ) ಆ.27ರಂದು ನಿಧನರಾದರು.
ಕನ್ಯಾನ ಮೂಲದವರಾದ ಶ್ರೀಪತಿ ರಾವ್ ಕೊಂಬೆಟ್ಟು ಶ್ರೀಧಾಮದಲ್ಲಿ ವಾಸ್ತವ್ಯ ಹೊಂದಿದ್ದರು. ಶ್ರೀಪತಿ ರಾವ್ ಅವರು ಪದ್ಮುಂಜ ಶಾಲೆಯಲ್ಲಿ ನಿವೃತ್ತಿ ಹೊಂದಿದ ಬಳಿಕ ವಿಶ್ರಾಂತ ಜೀವನದಲ್ಲಿ ಕೊಂಬೆಟ್ಟು ಬಿಜೆಪಿ ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ ಮೋಹಿನಿ ರಾವ್, ಪುತ್ರಿಯರಾದ ಸುಪ್ರಿತಾ ಮತ್ತು ಸರಿತಾ, ಅಳಿಯಂದಿರಾದ ಬೆಂಗಳೂರು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮಂಡಲದ ಅಧ್ಯಕ್ಷ ಶ್ರೀಧರ್ ಮತ್ತು ಸಂತೋಷ್ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.